  : ಗ್ರಾಹಕರಿಗೆ ಮತ್ತೆ ಬ್ಯಾಡ್‌ನ್ಯೂಸ್‌; 7,000 ರೂ. ಗಡಿ ಮುಟ್ಟಿದ ಚಿನ್ನದ ದರ
ಬೆಂಗಳೂರು:ಸತತ ಎರಡನೇ ದಿನವಾದ ಇಂದೂ (ಸೆಪ್ಟೆಂಬರ್‌ 24) ಚಿನ್ನದ ದರ ಏರಿಕೆಯಾಗಿದೆ (  ). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 20 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 21 ರೂ. ಅಧಿಕವಾಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,000 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 7,636 ರೂ. ಆಗಿದೆ.
22 ಕ್ಯಾರಟ್‌ ಚಿನ್ನದ ದರಗಳ ವಿವರ
22 ಕ್ಯಾರಟ್‌ನ 8 ಗ್ರಾಂ ಚಿನ್ನ 56,000 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 70,000 ರೂ. ಮತ್ತು 100 ಗ್ರಾಂಗೆ 7,00,000 ರೂ. ಪಾವತಿಸಬೇಕಾಗುತ್ತದೆ.
24 ಕ್ಯಾರಟ್‌ ಚಿನ್ನದ ದರಗಳ ವಿವರ
24 ಕ್ಯಾರಟ್‌ನ 8 ಗ್ರಾಂ ಚಿನ್ನ 61,088 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 76,360 ರೂ. ಮತ್ತು 100 ಗ್ರಾಂಗೆ 7,63,600 ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ಬೆಳ್ಳಿ ಬೆಲೆ
ಇತ್ತ ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ 1 ಗ್ರಾಂಗೆ 87 ರೂ. ಇದೆ. 8 ಗ್ರಾಂಗೆ 696 ರೂ., 10 ಗ್ರಾಂಗೆ 870 ರೂ. ಮತ್ತು 1 ಕೆಜಿಗೆ 87,000 ರೂ. ಪಾವತಿಸಬೇಕಾಗುತ್ತದೆ.
ಚಿನ್ನಾಭರಣ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶ
ಶುದ್ಧತೆ:ಚಿನ್ನಾಭರಣ ಖರೀದಿಸುವ ಮುನ್ನ ಅದರ ಶುದ್ಧತೆಯನ್ನು ಪರಿಶೀಲಿಸುವುದು ಅಗತ್ಯ. ಚಿನ್ನದ ಮೇಲೆ ಶುದ್ಧತೆಯನ್ನು ಸೂಚಿಸುವ ಬಿಐಎಸ್‌ () ಹಾಲ್‌ಮಾರ್ಕ್‌ ಇದೆ ಎನ್ನುವುದನ್ನು ಖಚಿತಪಡಿಸಿ. ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂಬುದನ್ನು ಆ ಮೂಲಕ ಪ್ರಮಾಣೀಕರಿಸಬಹುದು.
ಬೆಲೆ:ಚಿನ್ನದ ಬೆಲೆ ಪ್ರತಿ ದಿನ ಬದಲಾಗುತ್ತಿರುತ್ತದೆ. ಖರೀದಿಸುವ ಮುನ್ನ ಬೆಲೆ ಎಷ್ಟಿದೆ ಎನ್ನುವುದನ್ನು ಗಮನಿಸಿ. ಇದಕ್ಕಾಗಿ ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಪರಿಶೀಲಿಸುವುದನ್ನು ಮರೆಯಬೇಡಿ.
ಹೋಲಿಕೆ ಮಾಡಿ:ಮತ್ತೊಂದು ಮುಖ್ಯ ವಿಚಾರ ಎಂದರೆ ಬೆಲೆಗಳ ಹೋಲಿಕೆ. ಬೇರೆ ಬೇರೆ ಜ್ಯುವೆಲ್ಲರಿಗಳಲ್ಲಿ ವ್ಯತ್ಯಸ್ತ ಬೆಲೆಗಳಿರುತ್ತವೆ. ನೀವು ಚಿನ್ನ ಖರೀದಿಸುವ ಮುನ್ನ ಬೆಲೆಗಳನ್ನು ಹೋಲಿಸಿ ನೋಡಿ. ಇದರಿಂದ ನಿಮಗೆ ಸಾಕಷ್ಟು ಹಣ ಉಳಿತಾಯು ಮಾಡಬಹುದಾಗಿದೆ.
ಮೇಕಿಂಗ್‌ ಚಾರ್ಜಸ್‌:ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ( ) ಮತ್ತು ವೇಸ್ಟೇಜ್ ಚಾರ್ಜ್ ( ) ಎಂದಿರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲ ಆಭರಣಗಳಿಗೆ ಮೇಕಿಂಗ್, ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರ ವರೆಗೆ ಇದೆ.
ವಿನ್ಯಾಸ:ಮೊದಲೇ ಹೇಳಿದಂತೆ ಆಭರಣಗಳ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಸೂಕ್ಷ್ಮ ಕೆತ್ತನೆಯ, ಕೈಯಿಂದ ತಯಾರಿಸುವ ಆಭರಣ ಸ್ವಲ್ಪ ದುಬಾರಿಯಾಗಿತ್ತವೆ. ಆದ್ದರಿಂದ ಈ ಬಗ್ಗೆಯೂ ಗಮನ ಹರಿಸಿ.
ಈ ಸುದ್ದಿಯನ್ನೂ ಓದಿ: : ನಿಮ್ಮ ಹಣಕಾಸು ಸುರಕ್ಷಿತವಾಗಿರಬೇಕೆ? ಅ.1ರ ಒಳಗೆ ಹೀಗೆ ಮಾಡಿ!