91 ಎಫ್‌ಎಂ ಟ್ರಾನ್ಸ್‌ಮಿಟರ್‌ಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 84 ಜಿಲ್ಲೆಗಳಲ್ಲಿ 91 ಎಫ್‌ಎಂ ಟ್ರಾನ್ಸ್‌ಮಿಟರ್‌ಗಳನ್ನು ಉದ್ಘಾಟಿಸಿದರು.
‘ರೇಡಿಯೋ ಮತ್ತು ಎಫ್‌ಎಂ ವಿಷಯಕ್ಕೆ ಬಂದರೆ, ಅದರೊಂದಿಗಿನ ನನ್ನ ಸಂಬಂಧವು ಭಾವೋದ್ರಿಕ್ತ ಕೇಳುಗ ಮತ್ತು ಆತಿಥೇ ಯರ ಸಂಬಂಧವಾಗಿದೆ’ ಎಂದು ಪ್ರಧಾನಿ ಹೇಳಿದರು.
‘ಇಂದು ಆಲ್ ಇಂಡಿಯಾ ರೇಡಿಯೊದ (ಎಐಆರ್) ಎಫ್‌ಎಂ ಸೇವೆಯ ವಿಸ್ತರಣೆಯು ಆಲ್ ಇಂಡಿಯಾ ಎಫ್‌ಎಂ ಆಗುವತ್ತ ಒಂದು ದೊಡ್ಡ ಮತ್ತು ಪ್ರಮುಖ ಹೆಜ್ಜೆಯಾಗಿದೆ. ಆಲ್ ಇಂಡಿಯಾ ಎಫ್‌ಎಂನ 91 ಎಫ್‌ಎಂ ಟ್ರಾನ್ಸ್‌ಮಿಟರ್‌ಗಳ ಈ ಬಿಡುಗಡೆ ಯು ದೇಶದ 85 ಜಿಲ್ಲೆಗಳ 2 ಕೋಟಿ ಜನರಿಗೆ ಉಡುಗೊರೆಯಂತಿದೆ ‘ಎಂದು ಪ್ರಧಾನಿ ಮೋದಿ ಹೇಳಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ‘ಇದೊಂದು ಐತಿಹಾಸಿಕ ಕ್ರಮವಾಗಿದೆ. ಇದು ಸ್ಥಳೀಯ ಜನರಿಗೆ ಮನರಂಜನೆ, ಕ್ರೀಡೆ ಮತ್ತು ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸಲು ತುಂಬಾ ಸಹಕಾರಿ ಯಾಗಲಿದೆ. ಮನ್ ಕಿ ಬಾತ್ ರೇಡಿಯೋ ಜನಪ್ರಿಯತೆಯನ್ನು ಹೆಚ್ಚಿಸಿತು’ ಎಂದಿದ್ದಾರೆ.
18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ 84 ಜಿಲ್ಲೆಗಳಲ್ಲಿ 91 ಹೊಸ 100 ವ್ಯಾಟ್ ಎಫ್‌ಎಂ ಟ್ರಾನ್ಸ್‌ಮಿಟರ್‌ಗಳನ್ನು ಸ್ಥಾಪಿಸಲಾಗಿದೆ.