 : ಇಸ್ರೋದಲ್ಲಿ 103 ಕಾಯಂ ಹುದ್ದೆಗಳಿವೆ, ಇಂದೇ ಅರ್ಜಿ ಸಲ್ಲಿಸಿ!
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ () 103 ವಿವಿಧ ಹುದ್ದೆಗಳಿಗೆ ಅರ್ಜಿ ( ) ಕರೆಯಲಾಗಿದೆ. ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರ () ಕಾಯಂ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ( ) ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ.
ಈ ಸಂಸ್ಥೆಯು ಹೊರಡಿಸಿದ ಅಧಿಸೂಚನೆಯ ಪ್ರಕಾರ ವೈದ್ಯಕೀಯ ಅಧಿಕಾರಿ – ಎಸ್‌ಡಿ (ಏವಿಯೇಷನ್ ​​ಅಥವಾ ಕ್ರೀಡೆ), ವೈದ್ಯಕೀಯ ಅಧಿಕಾರಿ – ಎಸ್‌ಸಿ, ವಿಜ್ಞಾನಿ ಅಥವಾ ಎಂಜಿನಿಯರ್ – ಎಸ್‌ಸಿ, ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ತಂತ್ರಜ್ಞ – ಬಿ, ಡ್ರಾಫ್ಟ್‌ಮನ್ – ಬಿ, ಸಹಾಯಕ (ರಾಜ್ ಭಾಷಾ) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅ.9.
ಈ ನೇಮಕಾತಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿವರಗಳು ಈ ಕೆಳಗಿನಂತಿವೆ:
ಖಾಲಿ ಹುದ್ದೆಗಳು:ವೈದ್ಯಕೀಯ ಅಧಿಕಾರಿ –  (ಏವಿಯೇಷನ್ ​​ಅಥವಾ ಕ್ರೀಡೆ), ವೈದ್ಯಕೀಯ ಅಧಿಕಾರಿ – , ವಿಜ್ಞಾನಿ ಅಥವಾ ಇಂಜಿನಿಯರ್ – , ತಾಂತ್ರಿಕ ಸಹಾಯಕ, ವೈಜ್ಞಾನಿಕ ಸಹಾಯಕ, ತಂತ್ರಜ್ಞ – , ಡ್ರಾಫ್ಟ್ಸ್ಮನ್ – , ಸಹಾಯಕ (ರಾಜ್ ಭಾಷಾ)
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ :103
ವೈದ್ಯಕೀಯ ಅಧಿಕಾರಿ  (ವಾಯುಯಾನ ಅಥವಾ ಕ್ರೀಡೆ) – 02ವೈದ್ಯಕೀಯ ಅಧಿಕಾರಿ  – 01ವಿಜ್ಞಾನಿ ಅಥವಾ ಇಂಜಿನಿಯರ್  – 10ತಾಂತ್ರಿಕ ಸಹಾಯಕ – 28ವೈಜ್ಞಾನಿಕ ಸಹಾಯಕ – 01ತಂತ್ರಜ್ಞ ಬಿ – 43ಡ್ರಾಟ್ಸ್ ಮೆನ್ ಬಿ – 13ಸಹಾಯಕ (ರಾಜ್ ಭಾಷಾ) – 05
ಶೈಕ್ಷಣಿಕ ಅರ್ಹತೆ:ಅರ್ಜಿ ಸಲ್ಲಿಸುವವರು 10ನೇ+ಐಟಿಐ, ಡಿಪ್ಲೊಮಾ, ಬಿಇ/ಬಿಟೆಕ್, ಎಂಇ/ಎಂಟೆಕ್‌ನಂತಹ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರಬೇಕು.
ವಯೋಮಿತಿ:ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ ವಯೋಮಿತಿ 35 ವರ್ಷಗಳು.
ವಯೋಮಿತಿ ಸಡಿಲಿಕೆ :ಈ ಕೆಳಕಂಡಂತೆ ಅಭ್ಯರ್ಥಿಗಳಿಗೆ ಸಡಿಲಿಕೆ ಅನ್ವಯಿಸುತ್ತದೆ.
ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ. ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ವಯೋಮಿತಿ ಸಡಿಲಿಕೆ.
ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: 09-10-2024
ಅರ್ಜಿ ಸಲ್ಲಿಸುವ ವಿಧಾನ:ಈ ಉದ್ಯೋಗಗಳಿಗೆ ಅರ್ಹರಾಗಿರುವವರು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಹುದ್ದೆಗಳ ನಂತರ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: : 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ