ಮೇ 24ರಿಂದ ಗೋ ಫಸ್ಟ್ ವಿಮಾನ ಸೇವೆ ಪುನಾರಂಭ..!
ದಿವಾಳಿ ಪರಿಹಾರ ವಿಚಾರದಲ್ಲಿ ನುರಿತ ಪರಿಣಿತರೊಬ್ಬರನ್ನು ಎನ್​ಸಿಎಲ್​ಟಿ ನೇಮಿಸಿದೆ. ಇವರು ಸಂಸ್ಥೆ ಹಾಗು ಅದರ ವಿಮಾನಗಳ ಗುತ್ತಿಗೆದಾರ ಸಂಸ್ಥೆಗಳ ಮಧ್ಯೆ ಮಾತುಕತೆ ನಡೆಸಿ ಒಂದು ಪರಿಹಾರ ಯೋಜನೆಯನ್ನು ರೂಪಿಸುವ ನಿರೀಕ್ಷೆ ಇದೆ.
ಅಲ್ಲಿಯವರೆಗೂ ಗೋ ಫಸ್ಟ್ ಸಣ್ಣ ಮಟ್ಟದಲ್ಲಿ ತನ್ನ ಸೇವೆಯನ್ನು ಪುನಾರಂಭಿಸಲಿದೆ. ಮೇ 24ರಿಂದ ಗೋ ಫಸ್ಟ್​ನ 20 ವಿಮಾನಗಳು ಓಡಾಟ ನಡೆಸಲಿವೆಯಂತೆ.
ಆರಂಭದಲ್ಲಿ ವಿಮಾನ ಹಾರಾಟವು ವಾರಕ್ಕೆ 1,200 ಫ್ಲೈಟ್​ಗೆ ಸೀಮಿತವಾಗಿರುತ್ತದೆ.
