ವಾಟ್ಸಾಪ್ ಭಾರತೀಯ ಬಳಕೆದಾರರಿಗೆ ಸ್ಪ್ಯಾಮ್ ಕರೆ: ನೋಟಿಸ್
ನವದೆಹಲಿ:ವಾಟ್ಸಾಪ್ ಭಾರತೀಯ ಬಳಕೆದಾರರಿಗೆ ಇಂಡೋನೇಷ್ಯಾ, ವಿಯೆಟ್ನಾಂ, ಮಲೇಶಿಯಾ, ಇಥಿಯೋಪಿಯಾ ಸೇರಿ ದಂತೆ ಹಲವು ದೇಶಗಳಿಂದ ಸ್ಪ್ಯಾಮ್ ಕರೆಗಳು ಬರುತ್ತಿದ್ದು, ಈ ಹೆಚ್ಚಿನ ಕರೆಗಳು +251 (ಇಥಿಯೋಪಿಯಾ), +62 (ಇಂಡೋನೇಷ್ಯಾ), +254 (ಕೀನ್ಯಾ), +84 (ವಿಯೆಟ್ನಾಂ) ಮೊದಲಾದ ದೇಶಗಳ ಕೋಡ್ ಹೊಂದಿರುತ್ತದೆ.
ಹೀಗಾಗಿ ಭಾರತೀಯ ಬಳಕೆದಾರರ ಸುರಕ್ಷತೆಗಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ವಾಟ್ಸಾಪ್ ಸಂಸ್ಥೆಗೆ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾರತೀಯ ಬಳಕೆದಾರರ ಗೌಪ್ಯ ಮಾಹಿತಿಯನ್ನು ಸಂರಕ್ಷಿ ಸಲು ಹಾಗೂ ಸುರಕ್ಷತೆಯನ್ನು ಖಾತರಿಪಡಿಸಲು ವಾಟ್ಸಾಪ್ ಮುಂದಾಗಿದೆ.
ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸುರಕ್ಷತಾ ವ್ಯವಸ್ಥೆಗಳನ್ನು ಹೆಚ್ಚಿಸುವುದಾಗಿ ವಾಟ್ಸಾಪ್ ಗುರುವಾರ ಹೇಳಿ ಕೊಂಡಿದ್ದು, ಈ ಮೂಲಕ  ಕರೆಗಳನ್ನು ಗಣನೀಯ ಸಂಖ್ಯೆಯಲ್ಲಿ ಇಳಿಸುವುದಾಗಿ ಘೋಷಿಸಿದೆ.