ಮ್ಯಾನ್‌ಕೈಂಡ್ ಫಾರ್ಮಾಕ್ಕೆ ಐಟಿ ದಾಳಿ
ಮುಂಬೈ:ತೆರಿಗೆ ವಂಚನೆ ಆರೋಪದ ಮೇಲೆಆದಾಯ ತೆರಿಗೆ ಇಲಾಖೆಯು ಗುರುವಾರ ಮ್ಯಾನ್‌ಕೈಂಡ್ ಫಾರ್ಮಾಕ್ಕೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿಯನ್ನು ನಡೆಸಿದೆ. ಆ
ಇಲಾಖೆಯು ದೆಹಲಿ ಮತ್ತು ಹತ್ತಿರದ ಸ್ಥಳಗಳಲ್ಲಿ ಕಂಪನಿಯ ಆವರಣಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಹಾಗೆಯೇ ಫಾರ್ಮಾಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಇದಕ್ಕೂ ಮುನ್ನ ಮ್ಯಾನ್‌ಕೈಂಡ್ ಫಾರ್ಮಾ ಮಂಗಳವಾರ ಷೇರು ಪೇಟೆಗೆ ಎಂಟ್ರಿ ನೀಡಿದೆ. ಇದಾದ ಬೆನ್ನಲ್ಲೇ ಮ್ಯಾನ್‌ಕೈಂಡ್ ಫಾರ್ಮಾದ ಷೇರುಗಳು ಎನ್‌ಎಸ್‌ಇಯಲ್ಲಿ ಶೇಕಡ 2.11ರಷ್ಟು ಕುಸಿತವನ್ನು ಕಂಡಿದೆ. ಪ್ರತಿ ಷೇರಿಗೆ 1353. 75 ರೂಪಾಯಿಗೆ ತಲುಪಿದೆ. ಬಿಎಸ್‌ಇ ಯಲ್ಲಿ ಮ್ಯಾನ್‌ಕೈಂಡ್ ಫಾರ್ಮಾ ಸ್ಟಾಕ್ ಶೇಕಡ 1.93ರಷ್ಟು ಕುಸಿದು 11:02 ಸಮಯಕ್ಕೆ 1355.15 ರೂಪಾಯಿಗೆ ತಲುಪಿದೆ.
ಆದಾಯ ತೆರಿಗೆ ಇಲಾಖೆ ದಾಳಿಯ ಸುದ್ದಿ ಬೆನ್ನಲ್ಲೇ ಮ್ಯಾನ್‌ಕೈಂಡ್ ಫಾರ್ಮಾ ಷೇರುಗಳು ಸುಮಾರು ಶೇಕಡ 5.5ರಷ್ಟು ಕುಸಿತ ಕಂಡಿದೆ.
ಮ್ಯಾನ್‌ಕೈಂಡ್ ಫಾರ್ಮಾ ದೇಶೀಯ ಮಾರಾಟದ ವಿಷಯದಲ್ಲಿ ಭಾರತದ ನಾಲ್ಕನೇ ಅತಿದೊಡ್ಡ ಔಷಧೀಯ ಕಂಪನಿಯಾಗಿದೆ.  ಅಡಿಯಲ್ಲಿ ಡಿಸೆಂಬರ್ 2022ರಲ್ಲಿ ಮಾರಾಟದ ಪ್ರಮಾಣ ನೋಡಿದಾಗ ಮ್ಯಾನ್‌ಕೈಂಡ್ ಫಾರ್ಮಾ ಮೂರನೇ-ಅತಿದೊಡ್ಡ ಕಂಪನಿಯಾಗಿದೆ. ಸಂಸ್ಥೆಯು ವಿವಿಧ ಔಷಧೀಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ತಯಾರಿಸುತ್ತದೆ. 4 ಏಪ್ರಿಲ್ 25ರಂದು ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ಆರಂಭವಾಗಿದೆ.
ಮ್ಯಾನ್‌ಕೈಂಡ್ ಫಾರ್ಮಾ ಐಪಿಒನ ಮುಖ್ಯ ಉದ್ದೇಶಗಳು ಮಾರಾಟ ಮಾಡುವ ಷೇರುದಾರರಿಂದ ಮಾಡುವುದು ಮತ್ತು ಷೇರು ವಿನಿಮಯ ಕೇಂದ್ರಗಳಲ್ಲಿ ಈಕ್ವಿಟಿ ಷೇರುಗಳನ್ನು ಲೀಸ್ಟಿಂಗ್ ಮಾಡುವ ಪ್ರಯೋಜನವನ್ನು ಪಡೆಯುವುದು ಆಗಿದೆ. ಪಬ್ಲಿಕ್ ಇಶ್ಯೂವಿನಿಂದ ಮೂಲಕ ಸಂಗ್ರಹಿಸಿದ ಎಲ್ಲಾ ಹಣವು ಷೇರುದಾರರನ್ನು ಮಾರಾಟ ಮಾಡಲು ಬಳಸಲಾಗುತ್ತದೆ. ಕಂಪನಿಯು ಇದರಿಂದ ಹಣವನ್ನು ಪಡೆಯುವುದಿಲ್ಲ.