ಮಾಜಿ ಕೇಂದ್ರ ಸಚಿವ ಸುಭಾಷ್ ಮಹಾರಿಯಾ ಬಿಜೆಪಿ ಸೇರ್ಪಡೆ
ಜೈಪುರ:ಮಾಜಿ ಕೇಂದ್ರ ಸಚಿವ ಸುಭಾಷ್ ಮಹಾರಿಯಾ ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆ ಇದೆ. ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ವಾಗ್ವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆಯಲು ನಿರ್ಧರಿಸಿ ದರು.
ಸುಭಾಷ್ ಮಹಾರಿಯಾ ಅವರು 2016 ರಲ್ಲಿ ಕಾಂಗ್ರೆಸ್‌ಗೆ ಬರುವ ಮೊದಲು ಬಿಜೆಪಿಯಲ್ಲಿ ದ್ದರು. ಅವರು 2019 ರಲ್ಲಿ ಸಿಕರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿ ಸ್ವಾಮಿ ಸುಮೇದಾನಂದ ಸರಸ್ವತಿ ವಿರುದ್ಧ ಸೋತಿದ್ದರು.
2019 ರ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ 25 ಸ್ಥಾನಗಳಲ್ಲಿ ಬಿಜೆಪಿ 24 ಸ್ಥಾನ ಗಳನ್ನು ಗೆದ್ದುಕೊಂಡಿದ್ದರೆ, ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿತ್ತು. 2019 ರಲ್ಲಿ ರಾಜಸ್ಥಾನದ ಎಲ್ಲಾ 25 ಲೋಕಸಭಾ ಸ್ಥಾನ ಗಳನ್ನು ಕಾಂಗ್ರೆಸ್ ಕಳೆದುಕೊಂಡಿತು.
ಸಿಕಾರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅವಮಾನ ಎದುರಿಸುತ್ತಿದ್ದಾರೆ ಎಂದು ಸುಭಾಷ್ ಮಹರಿಯಾ ಪ್ರತಿಪಾದಿಸಿದರು. ಇಂತಹ ಪರಿಸ್ಥಿತಿಯಲ್ಲಿ ಇನ್ನು ಮುಂದೆ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ ಎಂದ ಅವರು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲ ವಾಗಿದೆ. ರೈತರು, ಯುವಕರು ಸೇರಿದಂತೆ ಜನರನ್ನು ವಂಚಿಸಿದೆ ಎಂದು ಆರೋಪಿಸಿದರು.
ಸುಭಾಷ್ ಮಹಾರಿಯಾ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ 1999 ರಿಂದ 2004 ರವರೆಗೆ ಗ್ರಾಮೀಣಾ ಭಿವೃದ್ಧಿ ಸಚಿವಾಲಯದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಸಿಕರ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದಾರೆ. ಈ ವರ್ಷದ ಕೊನೆಯಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.