  : ತಿರುಪತಿ ಲಡ್ಡು ಬಗ್ಗೆ ವಿವಾದಾತ್ಮಕ ಹೇಳಿಕೆ; ಪವನ್‌ ಕಲ್ಯಾಣ್‌ ಆಕ್ರೋಶದ ಬೆನ್ನಲ್ಲೇ ಕ್ಷಮೆಯಾಚಿಸಿದ ನಟ ಕಾರ್ತಿ
ಹೈದರಾಬಾದ್‌: ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (  ) ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳು ನಟ ಕಾರ್ತಿ(  ) ವಿರುದ್ಧ ಆಂದ್ರಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌( ) ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕಾರ್ತಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಕ್ಷಮೆಯಾಚಿಸಿದ್ದಾರೆ.
ಕಾರ್ತಿ ಹೇಳಿದ್ದೇನು?
ಸೆ.23ರಂದು ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ನಿರೂಪಕಿ ತಿರುಪತಿ ಲಡ್ಡು ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಮೀಮ್ಸ್‌ಗಳನ್ನು ಸ್ಕ್ರೀನ್‌ ಮೇಲೆ ಪ್ರದರ್ಶಿಸಿದ್ದರು. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕಾರ್ತಿ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿ, ಈಗ ಲಡ್ಡು ಬಗ್ಗೆ ಮಾತನಾಡಬಾರದು. ಇಂತಹ ಸೂಕ್ಷ್ಮ ವಿಚಾರಗಳು ನನಗೆ ಬೇಕಿಲ್ಲ ಎಂದಿದ್ದರು.
ತಿರುಗೇಟು ಕೊಟ್ಟ ಪವನ್‌ ಕಲ್ಯಾಣ್‌
ಇನ್ನು ಕಾರ್ತಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಪವನ್‌ ಕಲ್ಯಾಣ್‌, ಸಿನಿಮಾ ಕ್ಷೇತ್ರದ ಪ್ರತಿಯೊಬ್ಬರೂ ಈ ಬಗ್ಗೆ ಮಾತನಾಡಬೇಕಿದೆ. ಒಂದೋ ಅವರು ಇದರ ವಿರುದ್ಧ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ಇಲ್ಲವೇ ಸುಮ್ಮನಿದ್ದು ಬಿಡಬೇಕು ಎಂದು ಹೇಳಿದ್ದಾರೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಇದರ ಬಗ್ಗೆ ಈ ರೀತಿ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಕಾರ್ತಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ನೀವು ಅದನ್ನು ಹೇಳುವ ಧೈರ್ಯ ಮಾಡಬೇಡಿ” ಎಂದು ಹೇಳಿದರು.
  #   24  #   . . #.    .     .       .#…../i032Maw3ax
ಕ್ಷಮೆಯಾಚಿಸಿದ ಕಾರ್ತಿ
ಇನ್ನು ಪವನ್‌ ಕಲ್ಯಾಣ್‌ ಹೇಳಿಕೆ ಬೆನ್ನಲ್ಲೇ ನಟ ಕಾರ್ತಿ ಕ್ಷಮೆಯಾಚಿಸಿದ್ದಾನೆ. ಆತ್ಮೀಯ ಪವನ್‌ ಕಲ್ಯಾಣ್ ಸರ್, ನಿಮ್ಮ ಬಗ್ಗೆ ಅಪಾರವಾದ ಗೌರವ ಇದೆ. ಯಾವುದೇ ಉದ್ಧೇಶಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ.  ಹೀಗಾಗಿ ನಾನು ಕ್ಷಮೆಯಾಚಿಸುತ್ತಿದ್ದೇನೆ.  ವೆಂಕಟೇಶ್ವರನ ವಿನಮ್ರ ಭಕ್ತನಾಗಿ, ನಾನು ಯಾವಾಗಲೂ ನಮ್ಮ ಸಂಪ್ರದಾಯಗಳನ್ನು ಪಾಲಿಸುತ್ತೇನೆ ಎಂದಿದ್ದಾರೆ.
@,     ,       .       ,      .  .
ಈ ಸುದ್ದಿಯನ್ನೂ ಓದಿ: : TTDಯ ಮಾಜಿ ಅಧ್ಯಕ್ಷರಿಬ್ಬರೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೇ? ಪವನ್‌ ಕಲ್ಯಾಣ್‌ ಮತ್ತೆ ಗುಡುಗು