ಮತಾಂತರ ಬೆದರಿಕೆ: ಬೇಸ್’ಬಾಲ್ ಆಟಗಾರ್ತಿ ಆತ್ಮಹತ್ಯೆ
ಜಬಲಪುರ:ಮತಾಂತರಕ್ಕಾಗಿ ನಿರಂತರ ಬೆದರಿಕೆ ಹಾಕುತ್ತಿದ್ದರಿಂದ ರಾಷ್ಟ್ರೀಯ ಬೇಸಬಾಲ್ ಆಟಗಾರ್ತಿ ಸಂಜನಾ ಬರಕಡೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಬ್ದುಲ್ ಮನ್ಸೂರಿಯನ್ನು ಬಂಧಿಸಿದ್ದಾರೆ.
ಸಂಜನಾಳ ತಂದೆಯು, ಅಬ್ದುಲ್ ಹಿಂದೂ ಎಂದು ನಂಬಿಸಿ ಸಂಜನಾನ ಜೊತೆಗೆ ಸ್ನೇಹ ಮಾಡಿದನು. ವರ್ಷಗಳ ಕಾಲ ಅವರಲ್ಲಿ ಸ್ನೇಹವಿತ್ತು. ಸಂಜನಾಗೆ ‘ಅಬ್ದುಲ್ ಮುಸಲ್ಮಾನನೆಂದು’ ತಿಳಿದ ನಂತರ ಅವಳು ಅವನ ಜೊತೆ ಸಂಬಂಧ ಕಡೆದುಕೊಂಡಳು. ಇದರಿಂದ ಅವನು ಆಕೆಗೆ ಬೆದರಿಸು ತ್ತಿದ್ದನು ಎಂದು ಹೇಳಿದರು.
ಸಂಜನಾಳ ತಾಯಿಯು, ಅಬ್ದುಲ್ ಮನ್ಸೂರಿ ಅಲಿಯಾಸ್ ರಾಜನ ಖಾನ್ ಸಂಜನಾಳ ಮೇಲೆ ನಿರಂತರ ಇಸ್ಲಾಂ ಸ್ವೀಕರಿಸುವುದಕ್ಕೆ ಒತ್ತಡ ಹೇರುತ್ತಿದ್ದನು. ಒಮ್ಮೆ ಅವನ ಕರೆ ಬಂದಿತ್ತು. ಆಗ ’ನಿಮ್ಮ ಮಗಳಿಗೆ ಇಸ್ಲಾಂ ಸ್ವೀಕರಿಸಲು ಹೇಳಿರಿ. ನಾನು ಆಕೆಯ ಜೊತೆ ವಿವಾಹ ಮಾಡಿಕೊಳ್ಳುವೆನು. ನೀವು ಎಲ್ಲರೂ ಇಸ್ಲಾಂ ಸ್ವೀಕರಿಸದಿದ್ದರೇ ನಮಗೆ ನಿಮ್ಮ ಮನೆ ಎಲ್ಲಿ ಇದೆ ಎಂದು ತಿಳಿದಿದೆ, ನಾವು ನಿಮ್ಮನ್ನು ಕೊಲ್ಲುವೆವು ಎಂದು ಹೇಳಿದ್ದನು ಎಂದು ಹೇಳಿದರು.
ಅಬ್ದುಲ್, ಸಂಜನಾನ ಕೆಲವು ದಾಖಲೆ ಮತ್ತು ಆಕೆ ಗೆದ್ದಿರುವ ಪದಕಗಳನ್ನು ಕಳವು ಮಾಡಿದ್ದನು. ಯಾವಾಗ ಸಂಜನಾಗೆ ಇದರ ಮಾಹಿತಿ ದೊರೆಯಿತೋ, ಆಗ ಅವಳು ಅವನಿಗೆ ಹಿಂತಿರುಗಿಸಲು ಹೇಳಿದಳು.