ನೀಟ್​ ಯುಜಿ- 2023 ಫಲಿತಾಂಶ ಇಂದು ಬಿಡುಗಡೆ..!
ನವದೆಹಲಿ:ವೈದ್ಯಕೀಯ ಶಿಕ್ಷಣಗಳಿಗೆ ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ () ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್​ ಯುಜಿ- 2023) ಫಲಿತಾಂಶ ಮಂಗಳವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮಣಿಪುರ ಹೊರತು ಪಡಿಸಿ, ದೇಶಾದ್ಯಂತ ಏಕಕಾಲದಲ್ಲಿ ಮೇ 7ರಂದು ನೀಟ್​ ಪರೀಕ್ಷೆಯನ್ನು ನಡೆಸಲಾಗಿದ್ದು, ಕಳೆದ ಜೂನ್​ 4ರಂದು ಇದರ ಕೀ ಉತ್ತರವನ್ನು ಪ್ರಕಟಿಸಲಾಗಿತ್ತು. ಈ ಉತ್ತರದ ವಿರುದ್ಧ ಆಪೇಕ್ಷಣೆ ಸಲ್ಲಿಕೆಗೆ ಜೂ. 6ರವರೆಗೆ ಅವಕಾಶ ನೀಡಲಾಗಿತ್ತು.
20.87 ಲಕ್ಷ ವಿದ್ಯಾರ್ಥಿಗಳು ನೀಟ್​ ಯುಜಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಮಣಿಪುರದಲ್ಲಿ ಜೂನ್​​ 6ರಂದು ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಅಖಿಲ ಭಾರತದ ಶ್ರೇಣಿಯ ಆಧಾರದ ಮೇಲೆ ಈ ಫಲಿತಾಂಶ ಬಿಡುಗಡೆ ಮಾಡಲಾಗುವುದು. ಫಲಿತಾಂಶ ಬಿಡುಗಡೆ ವೇಳೆಗೆ ಕಟ್​ ಆಫ್​ ಶೇಕಡಾ ವಾರುಗಳನ್ನು ಪ್ರಕಟಿಸ ಲಾಗುವುದು. ನೀಟ್​ ಫಲಿತಾಂಶವನ್ನು ... ಅಥವಾ .. ಅಲ್ಲಿ ವೀಕ್ಷಣೆ ಮಾಡಬಹುದು.
ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಇಂದು ಫಲಿತಾಂಶ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.