ಜೆಡಿಯು ಮೈತ್ರಿ ಕೈ ಬಿಟ್ಟ ಹಿಂದೂಸ್ತಾನಿ ಅವಾಮ್ ಮೋರ್ಚಾ
ಪಾಟ್ನಾ:ಬಿಹಾರ ಸಿಎಂ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ತಮ್ಮ ಸರ್ಕಾರ ಹಳೆಯ ಮಿತ್ರ ಪಕ್ಷವಾದ ಹಿಂದೂಸ್ತಾನಿ ಅವಾಮ್ ಮೋರ್ಚಾ ಜೊತೆಗಿನ ಮೈತ್ರಿಯನ್ನು ಕಳೆದುಕೊಂಡಿ ದ್ದಾರೆ.
ಹಠಾತ್ ಬೆಳವಣಿಗೆಯಲ್ಲಿ ಬಿಹಾರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಚಿವ ಸಂತೋಷ್ ಸುಮನ್ ನಿತೀಶ್ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದ್ದು, ತಮ್ಮ ಪಕ್ಷ ಎಚ್‌ಎಎಂ ಅನ್ನು ನಿತೀಶ್ ಅವರ ಜೆಡಿಯು ಜೊತೆ ವಿಲೀನಗೊಳಿಸುವ ಹೇಳಿಕೆಗಳನ್ನು ತಳ್ಳಿ ಹಾಕಿದ್ದಾರೆ.
ಇದು ನಿತೀಶ್ ಅವರ ವಿರೋಧ ಪಕ್ಷಗಳ ಒಗ್ಗಟ್ಟಿನ ಪ್ರಯತ್ನಕ್ಕೆ ಹಿನ್ನಡೆಯಾಗಬಹುದು. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ ಪ್ರಮುಖರು ಪಾಲ್ಗೊಳ್ಳುವ ನಿತೀಶ್ ಮುಂದಿನ ವಾರ ಸಮಾವೇಶವನ್ನು ಆಯೋಜಿಸಲಿದ್ದಾರೆ. ಸುಮನ್ ಅವರು ನಿತೀಶ್ ವಿರುದ್ಧ ಬಂಡಾಯದ ಇತಿಹಾಸ ಹೊಂದಿರುವ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ತಂದೆ ಸ್ಥಾಪಿಸಿದ ಎಚ್‌ಎಎಂನ ಮುಖ್ಯಸ್ಥ ರಾಗಿದ್ದಾರೆ.
ಪಕ್ಷದ ನೇತೃತ್ವ ವಹಿಸಿದ್ದ ತಮ್ಮ ತಂದೆ ನಿತೀಶ್ ಅವರ ಮೇಲಿನ ನಿಷ್ಠೆಯಿಂದಾಗಿ ಕಳೆದ ವರ್ಷ ಎನ್‌ಡಿಎ ತೊರೆದು ಮಹಾಘಟಬಂಧನ್‌ಗೆ ಸೇರಲು ನಿರ್ಧರಿಸಿದ್ದರು. ಮಹಾಘಟಬಂಧನ್‌ನಲ್ಲಿ ಉಳಿಯಲು ಅವಕಾಶ ನೀಡಬೇಕೇ ಅಥವಾ ಉಚ್ಚಾಟಿಸಬೇಕೇ ಎಂಬುದನ್ನು ಸಿಎಂ ನಿರ್ಧರಿಸಬೇಕು, ಅದರಂತೆ ನಾವು ನಿರ್ಧರಿಸುತ್ತೇವೆ. ಆದರೆ ಜೆಡಿಯುನ ಪ್ರಸ್ತಾಪವನ್ನು ಗಮನದಲ್ಲಿಟ್ಟು ಕೊಂಡು ನನ್ನ ಪಕ್ಷವನ್ನು ಅಳಿವಿನಿಂದ ರಕ್ಷಿಸಲು ನಾನು ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಆದ್ದರಿಂದ ನಾನು ರಾಜೀನಾಮೆ ನೀಡಿದ್ದೇನೆ ಎಂದು ಸುಮನ್ ಹೇಳಿದರು.
ಸಂತೋಷ್‌ ಸುಮನ್ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದರೆ, ಎಚ್‌ಎಎಂ ಮಾಂಝಿ ಸೇರಿದಂತೆ ಒಟ್ಟು ನಾಲ್ಕು ಶಾಸಕರನ್ನು ಹೊಂದಿದೆ.