ಪೆಟ್ರೋಲ್‌ ಸುರಿದ ಸ್ನೇಹಿತರು: ವಿದ್ಯಾರ್ಥಿ ಸಾವು
ಬಾಪಟ್ಲಾ:ವಿದ್ಯಾರ್ಥಿ ಅಮರನಾಥ್ ಮೇಲೆ ಸ್ನೇಹಿತರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಚೆರುಕುಪಲ್ಲಿ ತಾಲೂಕಿನ ರಾಜೋಲು ಎಂಬಲ್ಲಿ ಈ ಘಟನೆ ನಡೆದಿದೆ.
ಟ್ಯೂಷನ್‌ಗೆ ಹೋಗುತ್ತಿದ್ದಾಗ ಬಾಲಕನ ಸ್ನೇಹಿತ ವೆಂಕಟೇಶ್ವರ ರೆಡ್ಡಿ ಇತರ ಕೆಲವರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ. ಅಮರನಾಥ್ ಅವರನ್ನು ಗುಂಟೂರು ಜಿಜಿಎಚ್‌ಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಚೆರುಕುಪಲ್ಲಿ ತಾಲೂಕಿನ ರಾಜೋಲು ಪಂಚಾಯತ್ ವ್ಯಾಪ್ತಿಯ ಉಪ್ಪಳ ವಾರಿಪಾಲೆಂನ ಉಪ್ಪಳ ಅಮರನಾಥ್ ಸ್ಥಳೀಯ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾನೆ. ಶುಕ್ರವಾರ ಬೆಳಗ್ಗೆಯೂ ಎಂದಿನಂತೆ ಅಮರನಾಥ್ ಟ್ಯೂಷನ್​ಗೆ ಹೋಗಿ ಬರುತ್ತಿದ್ದರು.
ಈ ವೇಳೆ ಸ್ನೇಹಿತ ವೆಂಕಟೇಶ್ವರ ರೆಡ್ಡಿ ಕೆಲವರ ಜೊತೆ ಸೇರಿ ಮಾರ್ಗಮಧ್ಯೆ ಅವರನಾಥ್​ನನ್ನು ಅಡ್ಡಗಟ್ಟಿದ್ದಾನೆ. ಈ ವೇಳೆ, ರೆಡ್ಲಪಾಲೆಂನಲ್ಲಿ ಅಮರನಾಥ್​ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಬಾಲಕ ಬೆಂಕಿಯ ಜ್ವಾಲೆಯ ನೋವಿನಿಂದ ಚೀರಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಬೆಂಕಿ ನಂದಿಸಿ ಆತನನ್ನು ಗುಂಟೂರು ಜಿಜಿಎಚ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಬಾಲಕ ಮೃತಪಟ್ಟಿದ್ದಾನೆ.