ಮಾಜಿ ಪೊಲೀಸ್ ಮಹಾನಿರ್ದೇಶಕರಿಗೆ 3 ವರ್ಷ ಜೈಲು ಶಿಕ್ಷೆ
ಚೆನ್ನೈ:ತಮಿಳುನಾಡಿನ ಮಾಜಿ ಪೊಲೀಸ್ ಮಹಾನಿರ್ದೇಶಕ ರಾಜೇಶ್ ದಾಸ್ ಅವರು ಮಹಿಳಾ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 3 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ಶುಕ್ರವಾರ ವಿಧಿಸಿದೆ.
ಮಹಿಳಾ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ರಾಜೇಶ್​ ದಾಸ್​ ಅವರನ್ನು ತಮಿಳುನಾಡಿನ ವಿಲ್ಲುಪುರಂ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿದ್ದು, 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಫೆ.2021ರಲ್ಲಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ರಾಜೇಶ್ ದಾಸ್ ವಿರುದ್ಧ ದೂರು ದಾಖಲಿಸಿದ್ದರು.
ಅಂದಿನ ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಭದ್ರತಾ ಕರ್ತವ್ಯಕ್ಕೆ ತೆರಳು ವಾಗ ರಾಜೇಶ್​ ದಾಸ್​ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಅಂದಿನ ಸರ್ಕಾರ ದಾಸ್​ ಅವರನ್ನು ಅಮಾನತು ಮಾಡಿತ್ತು ಮತ್ತು ಪ್ರಕರಣದ ತನಿಖೆಗೆ ಆರು ಸದಸ್ಯರ ಸಮಿತಿ ರಚನೆ ಮಾಡಿತ್ತು.
ಪ್ರಾಸಿಕ್ಯೂಷನ್ ಪೊಲೀಸ್ ಸಿಬ್ಬಂದಿ ಸೇರಿದಂತೆ 68 ಜನರ ಹೇಳಿಕೆಗಳನ್ನು ದಾಖಲಿಸಿದೆ.