 : ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಕ್ರಿಕೆಟಿಗ ಸೆಹವಾಗ್‌ ಪೋಸ್ಟ್‌
ನವದೆಹಲಿ:ಭಾರತ ಕ್ರಿಕೆಟ್‌ ತಂಡದ ಮಾಜಿ ಡ್ಯಾಶಿಂಗ್‌ ಆರಂಭಿಕ ಆಟಗಾರ ವಿರೇಂದ್ರ ಸೆಹವಾಗ್‌( ) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಾಡಿರುವ ಪೋಸ್ಟ್‌ ಒಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರವಲ್ಲದೇ ರಾಜಕೀಯ ವಲಯದಲ್ಲೂ ಭಾರೀ ಕುತೂಹಲ ಮೂಡಿಸಿದೆ. ಇದುವರೆಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಯೋಜನೆಗಳಿಗೆ ಬೆಂಬಲ ಸೂಚಿಸುತ್ತಿದ್ದ ಸೆಹವಾಗ್‌ ದೀಢೀರ್‌ ಆಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಹರಿಯಾಣ ಚುನಾವಣೆ(  2024) ಹಿನ್ನೆಲೆಯಲ್ಲಿ ಸೆಹವಾಗ್‌ ಕಾಂಗ್ರೆಸ್ ಅಭ್ಯರ್ಥಿ ಅನಿರುದ್ಧ ಚೌಧರಿ ಅವರ ಪ್ರಚಾರದ ವಿಡಿಯೊಗಳನ್ನು ಮತ್ತು ಮತಯಂತ್ರದಲ್ಲಿ ಚೌಧರಿ ಹೆಸರಿನ ಮುಂದೆ ಬಟನ್ ಒತ್ತುತ್ತಿರುವಂತೆ ತೋರುವ ಇಮೇಜ್  ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಕಂಡು ಅನೇಕರು ಸೆಹವಾಗ್‌ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಕಡೆ ಒಲವು ಹೊಂದಿದ್ದಾರೆ ಎಂದು ನೆಟ್ಟಿಗರು ಚರ್ಚಿಸಲು ಆರಂಭಿಸಿದ್ದಾರೆ.
🚨         .../yQ4HoYNkTU
2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೆಹವಾಗ್‌ಗೆ ಬಿಜೆಪಿ ಟಿಕೆಟ್ ಆಫರ್ ನೀಡಿತ್ತು. ಆದರೆ ಆ ವೇಳೆ ಸೆಹವಾಗ್‌ ಟಿಕೆಟ್ ಆಫರ್ ತಿರಸ್ಕರಿಸಿ ಮೋದಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದರು. ಇದೀಗ ಕಾಂಗ್ರೆಸ್ ಪರ ಪೋಸ್ಟ್‌ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ  : ಭಾರತ-ಆಸೀಸ್‌ ಬಾಕ್ಸಿಂಗ್‌ ಡೇ ಟೆಸ್ಟ್‌; ದಾಖಲೆಯ ಟಿಕೆಟ್‌ ಸೇಲ್‌
 :   ,                🔥                  .    ,   …../obqQkI8ks7
ಸೆಹವಾಗ್‌ ಕಳೆದ ವಾರ ಮೋದಿ ಸರ್ಕಾರವನ್ನು ಪ್ರಶ್ನಿಸಿ ಹಲವು ಟ್ವೀಟ್‌ ಮಾಡಿದ್ದರು. ಇದೇ ಕಾರಣಕ್ಕೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ ಎದುರಿಸಿದ್ದರು. ಪಿಎಸ್‌ಯು ಬ್ಯಾಂಕ್‌ಗಳ ದೃಢತೆಯ ಬಗ್ಗೆ ಪ್ರಧಾನಿ ಮೋದಿ ಅವರ ಪೋಸ್ಟ್ ಟೀಕಿಸಿ ವಿರೋಧಿಸಿ ಪ್ರಶ್ನಿಸಿದ್ದರು. ಇದೀಗ ಕಾಂಗ್ರೆಸ್‌ ಪರ ಪೋಸ್ಟ್‌ ಮಾಡಿ ಪರೋಕ್ಷವಾಗಿ ಬಿಜೆಪಿಗೆ ಟಾಂಗ್‌ ಕೊಟ್ಟಂತಿದೆ.
वीरेंद्र सहवाग की क्या मजबूरी रही होगी जो उन्होंने यह ट्वीट डिलीट कर दिया?             ?@../jDJL9E1jFZ
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣೆ ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಸೆಹವಾಗ್​ ಅವರು 14 ವರ್ಷದ ಕ್ರಿಕೆಟ್​ ಬಾಳ್ವೆಯಲ್ಲಿ 17,000 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರಿಯ ರನ್​ ಬಾರಿಸಿದ್ದಾರೆ. ಭಾರತ ಪರ ಟೆಸ್ಟ್​ನಲ್ಲಿ ತ್ರಿಶತಕ ​ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಯೂ ಇವರದ್ದಾಗಿದೆ. ಸಚಿನ್​ ಬಳಿಕ ಏಕದಿನದಲ್ಲಿ ದ್ವಿಶತಕ ಬಾರಿಸಿದ ದ್ವಿತೀಯ ಆಟಗಾರನೂ ಹೌದು. ಒಟ್ಟು 251 ಏಕದಿನ ಪಂದ್ಯ ಆಡಿ 8273 ರನ್​ ಬಾರಿಸಿದ್ದಾರೆ. 15 ಶತಕ, 1 ದ್ವಿಶತಕ ಮತ್ತು 38 ಅರ್ಧಶತಕ ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 8586 ರನ್​, 23 ಶತಕ 6 ದ್ವಿಶತಕ 2 ತ್ರಿಶತಕ ಬಾರಿಸಿದ್ದಾರೆ.
ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮೊದಲ ಬಾರಿ ನಾಯಕನಾಗಿ ಮುನ್ನಡೆಸಿದ ಕೀರ್ತಿಯೂ ಇವರದ್ದಾಗಿದೆ. 19 ಟಿ20 ಪಂದ್ಯಗಳಿಂದ 394 ರನ್​ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ 2728 ರನ್​ ಬಾರಿಸಿದ್ದಾರೆ. 2 ಶತಕ ಕೂಡ ಒಳಗೊಂಡಿದೆ.