ಜೂ.29ರಂದು ಷೇರು ಮಾರುಕಟ್ಟೆಗೆ ರಜೆ
ಬಹು ಸರಕು ವಿನಿಯಮ ಮಾರುಕಟ್ಟೆ ಎನಿಸಿದ ಎಂಸಿಎಕ್ಸ್ ಜೂನ್ 29ರಂದು ಸಂಜೆಯ ವರೆಗೂ ಬಂದ್ ಆಗಿರುತ್ತದೆ. ಸಂಜೆ 5ರ ಬಳಿಕ ಮಧ್ಯರಾತ್ರಿಯವರೆಗೂ ಅದು ತೆರೆದಿರು ತ್ತದೆ. ಕಮಾಡಿಟಿ ಡಿರೈವೇಟಿವ್ ಸೆಗ್ಮೆಂಟ್​ನಲ್ಲೂ ಸಂಜೆಯ ಬಳಿಕ ವಹಿವಾಟು ಇರುತ್ತದೆ.
ಷೇರು ಮಾರುಕಟ್ಟೆಗಳಿಗೆ ರಜಾ ದಿನಗಳ ಪಟ್ಟಿ
ಮಂಗಳವಾರ ಭಾರತದ ಬಿಎಸ್​ಇ ಮತ್ತು ಎನ್​ಎಸ್​ಇ ಷೇರು ವಿನಿಮಯ ಕೇಂದ್ರಗಳು ಭರ್ಜರಿ ವಹಿವಾಟು ಕಾಣುತ್ತಿವೆ. ಸೆನ್ಸೆಕ್ಸ್ ಬೆಳಗ್ಗೆಯೇ 100 ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಮತ್ತೆ 18,700 ಅಂಕಗಳ ಮಟ್ಟಕ್ಕಿಂತ ಮೇಲೇರಿದೆ.