28 ವರ್ಷಗಳ ಹಿಂದಿನ ಪ್ರಕರಣ: ವೃದ್ಧನಿಗೆ ಅರೆಸ್ಟ್​​ ವಾರಂಟ್…!
ಬಾರಾಬಂಕಿ:ಉತ್ತರ ಪ್ರದೇಶದಲ್ಲಿ 28 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಎಮ್ಮೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ನ್ಯಾಯಾಲಯವು 83 ವರ್ಷದ ವ್ಯಕ್ತಿಯ ವಿರುದ್ಧ ಅರೆಸ್ಟ್​ ವಾರಂಟ್ ಜಾರಿ ಮಾಡಿದೆ.
ಎಮ್ಮೆ ಸಾವಿಗೆ ಸಂಬಂಧಿಸಿದಂತೆ ಬರೇಲಿ ನ್ಯಾಯಾಲವು 83 ವರ್ಷದ ಅಚ್ಚನ್‌ ವಿರುದ್ಧ ಅರೆಸ್ಟ್​ ವಾರಂಟ್ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧನಿಗೆ ಹಲವು ವರ್ಷ ಗಳ ಹಿಂದೆ ಕೋರ್ಟ್​ ಜಾಮೀನು ನೀಡಿತ್ತು.
ಮುನವ್ವರ್ ಅವರ ಮಗ ಅಚ್ಚನ್ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಬಾರಾಬಂಕಿ ಡಿಪೋ ದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ 1994ರಲ್ಲಿ ಕೈಸರ್‌ಬಾಗ್‌ನಿಂದ ಬರೇಲಿಗೆ ಹೋಗುತ್ತಿದ್ದಾಗ ಅಚ್ಚನ್ ಅವರೇ ಬಸ್ ಓಡಿಸುತ್ತಿದ್ದರು. ಈ ವೇಳೆ ದಾರಿಯಲ್ಲಿ ದಿಢೀ ರನೇ ಎಮ್ಮೆ ಬಸ್ಸಿನ ಮುಂದೆ ಬಂದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಸಾವನ್ನಪ್ಪಿತ್ತು.
ಈ ಕುರಿತು ಫರೀದ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಾಮೀನು ಪಡೆದುಕೊಂಡ ಅಚ್ಚನ್, ಬಳಿಕ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಇದಾದ ನಂತರ ಕೈಸರ್‌ಬಾಗ್, ಚಾರ್‌ಬಾಗ್ ಮತ್ತು ಬಾರಾಬಂಕಿ ಡಿಪೋಗಳಿಗೆ ಬಸ್ ಡ್ರೈವರ್​ ಆಗಿ ಕೆಲಸ ಮಾಡಿ, ಸರಿಸುಮಾರು 20 ವರ್ಷಗಳ ಹಿಂದೆ ನಿವೃತ್ತರಾದರು.
 - 
ಸೋಮವಾರ ಫರೀದ್‌ಪುರ ಠಾಣೆಯ ಎಸ್‌ಐ ವಿಜಯ್‌ ಪಾಲ್‌ ಬಂದು ಅರೆಸ್ಟ್‌ ವಾರಂಟ್‌ ತೋರಿಸಿದಾಗ ಅಚ್ಚರಿ ಆಯ್ತು. ನನಗೆ ಪಾರ್ಶ್ವವಾಯು ಮತ್ತು ಅನಾರೋಗ್ಯ ಇರುವ ಕಾರಣ ನಡೆಯಲು ಆಗುವುದಿಲ್ಲ ಎಂದು ವೃದ್ಧ ಅಳಲು ತೋಡಿಕೊಂಡಿದ್ದಾರೆ. ಜುಲೈ 17 ರಂದು ನಿಗದಿಪಡಿಸಲಾದ ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ.