12 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಗುವಾಹಟಿ:ಕಾರಿನಲ್ಲಿ ಮಾದಕ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿ ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಕಾಮ್ರೂಪ್ ಜಿಲ್ಲೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸುಳಿವಿನ ಮೇರೆಗೆ ಹೆಚ್ಚುವರಿ ಎಸ್ಪಿ ಕಲ್ಯಾಣ್ ಪಾಠಕ್ ನೇತೃತ್ವದ ಕಾಮರೂಪ್ ಜಿಲ್ಲಾ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿ ಗುವಾಹಟಿಯಿಂದ ಧುಬ್ರಿಗೆ ಕಾರಿನಲ್ಲಿ ಮುಂಜಾನೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಪಲಾಸ್ಬರಿಯಲ್ಲಿ ವಾಹನವನ್ನು ತಡೆದು 700 ಗ್ರಾಂ ತೂಕದ ಹೆರಾಯಿನ್ ಪ್ಯಾಕೆಟ್‍ಗಳನ್ನು ಹೊಂದಿರುವ 50 ಸೋಪ್ ಬಾಕ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 25 ರಂದು ಹಜೋದಲ್ಲಿ ಅಪಘಾತಕ್ಕೀಡಾದ ಮತ್ತೊಂದು ಎಸ್ಯುವಿಯಿಂದ 500 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳ ಲಾಗಿದೆ ಎಂದು ಡಿಐಜಿ ತಿಳಿಸಿದ್ದಾರೆ.
