ಪುನರಾಭಿವೃದ್ಧಿಗೊಂಡ  ಸಂಕೀರ್ಣ ನಾಳೆ ಉದ್ಘಾಟನೆ
ವಿಶ್ವದ ನಾಯಕತ್ವ ವಹಿಸುವ ಮಹತ್ವದ ಜವಾಬ್ದಾರಿಯನ್ನು ಈ ಬಾರಿ ಭಾರತ ನಿಭಾ ಯಿಸುತ್ತಿದೆ. ಸೆಪ್ಟಂಬರ್ ನಲ್ಲಿ ನಡೆಯ ಲಿರುವ G20 ಸಮಾವೇಶದ ನೇತೃತ್ವವನ್ನು ಭಾರತ ವಹಿಸಿಕೊಂಡಿದೆ.‌ ಸೆಪ್ಟಂಬರ್ ನಲ್ಲಿ ಮಹಾ ಅಧಿವೇಶನಕ್ಕೆ ನವದೆಹಲಿಯ ಪ್ರಗತಿ ಮೈದಾನ ಅದ್ಧೂರಿಯಾಗಿ ಸಿದ್ಧಗೊಳ್ಳುತ್ತಿದೆ.
ನವದೆಹಲಿಯ ಪ್ರಗತಿ ಮೈದಾನದ ಪುನರಾಭಿವೃದ್ಧಿಗೊಂಡ  ಸಂಕೀರ್ಣವನ್ನು (    G20  ) ಪ್ರಧಾನಿ ನರೇಂದ್ರ ಮೋದಿ (   ) ಬುಧವಾರ ( 26) ಲೋಕಾರ್ಪಣೆ ಮಾಡಲಿದ್ದಾರೆ.
ಪ್ರಧಾನಿ ಲೋಕಾರ್ಪಣೆ ಮಾಡುತ್ತಿರುವ ಪ್ರಗತಿ ಮೈದಾನದ ಸಭಾಂಗಣ ಭಾರತದ ಅತಿದೊಡ್ಡ ಸಭಾಂಗಣ ಎನಿಸಿಕೊಳ್ಳಲಿದ್ದು, ವಿಶ್ವದರ್ಜೆಯ ತಂತ್ರಜ್ಞಾನ ಹೊಂದಿದೆ. ಜರ್ಮನಿಯ ಹ್ಯಾನೋವರ್ ಎಕ್ಸಿಬಿಷನ್ ಸೆಂಟರ್, ಶಾಂಘೈನಲ್ಲಿರುವ ನ್ಯಾಷನಲ್ ಎಕ್ಸಿಬಿಷನ್ ಮತ್ತು ಕನ್ವೆನ್ಷನ್ ಸೆಂಟರ್ ನಂತಹ ಬೃಹತ್ ಸಂಕೀರ್ಣಗಳಿಗೆ ಪ್ರತಿಸ್ಪರ್ಧಿಯಾಗಿದೆ. ಮೂಲಸೌಕರ್ಯವು ವಿಶ್ವ ದರ್ಜೆಯ ಕಾರ್ಯಕ್ರಮಗಳನ್ನು ನಿರೂಪಿ ಸುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
5,500 ಕ್ಕೂ ಹೆಚ್ಚು ವಾಹನ ನಿಲುಗಡೆಗೆ ಸ್ಥಳ ಇದ್ದು, ಸಿಗ್ನಲ್-ಮುಕ್ತ ರಸ್ತೆಗಳ ಮೂಲಕ ಸುಲಭವಾಗಿ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ. G20 ನಾಯಕರನ್ನ ಬರಮಾಡಿಕೊಳ್ಳಲು ಭಾರತದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ವಿಶ್ವದರ್ಜೆಯ ಆಡಿಟೋ ರಿಯಂ ಕಣ್ಮನ ಸೆಳೆಯುತ್ತಿದೆ.