ಅವಿಶ್ವಾಸ ನಿರ್ಣಯ: ಸ್ಪೀಕರ್‌ಗೆ ಪ್ರಸ್ತಾವನೆ ಸಲ್ಲಿಸಿದ ಕಾಂಗ್ರೆಸ್‌
ನವದೆಹಲಿ:ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪಣ ತೊಟ್ಟಿರುವ ‘ಇಂಡಿಯಾ’ವು, ಲೋಕಸಭೆಯಲ್ಲಿ ಬುಧವಾ ರವೇ ಅವಿಶ್ವಾಸ ನಿರ್ಣಯ ಮಂಡಿಸಲು ಸ್ಪೀಕರ್‌ಗೆ ಕಾಂಗ್ರೆಸ್‌ ಪ್ರಸ್ತಾವನೆ ಸಲ್ಲಿಸಿದೆ.
ಈ ಕುರಿತು ಸ್ಪೀಕರ್‌ ಅವರಿಗೆ ಲಿಖಿತವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸತ್‌ನ ಕಾಂಗ್ರೆಸ್‌ ಪಕ್ಷದ ಉಪನಾಯಕ ಗೌರವ್‌ ಗೋಗಿ ಹೇಳಿದ್ದಾರೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದೆ, ಲೋಕಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಸಂಸದೀಯ ಸಭೆ ನಡೆದಿದ್ದು ಒಟ್ಟು 26 ಪಕ್ಷಗಳ ಒಕ್ಕೂಟ ಇಂಡಿಯಾದಿಂದ ಅವಿಶ್ವಾಸ ನಿರ್ಣಯ ಮಂಡನೆ ನಡೆಯಲಿದೆ ಎಂದು ಗೌರವ್‌ ಗೋಗಿ ಹೇಳಿದ್ದಾರೆ.
ಬಳಿಕ ರಾಜ್ಯಸಭೆಯಲ್ಲಿಯೂ ಇದೇ ತಂತ್ರ ಹೂಡಲು ತೀರ್ಮಾನಿಸಲಾಗಿದೆ ಎಂದು ವಿರೋಧ ಪಕ್ಷಗಳ ಮೂಲಗಳು ತಿಳಿಸಿವೆ.
ಕಾರ್ಗಿಲ್ ಹುತಾತ್ಮರಿಗೆ ನಮಿಸೋಣ…ಇದನ್ನು ಓದಿ
://.//kargil_martyrs/ಆಗಸ್ಟ್ 11 ರವರೆಗೆ ಮುಂಗಾರು ಅಧಿವೇಶನ ನಡೆಯಲಿದೆ. 23 ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ದೆಹಲಿ ಸುಗ್ರೀ ವಾಜ್ಞೆ ಸೇರಿದಂತೆ 31 ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.