ಅಮೆಜಾನ್ ಇಂಡಿಯಾದಿಂದ ಶ್ರೀನಗರದ ದಾಲ್ ಲೇಕ್ ನಲ್ಲಿ ದೇಶದ ಮೊಟ್ಟಮೊದಲ ತೇಲುವ  `ಐ ಹ್ಯಾವ್ ಸ್ಪೇಸ್’ ಮಳಿಗೆ ಸೇರ್ಪಡೆ
ನವದೆಹಲಿ:ಅಮೆಜಾನ್ ಇಂಡಿಯಾ ತನ್ನ ಮೊಟ್ಟಮೊದಲ ತೇಲುವ `ಐ ಹ್ಯಾವ್ ಸ್ಪೇಸ್’ ಮಳಿಗೆಯನ್ನು ಶ್ರೀನಗರದ ದಾಲ್ ಲೇಕ್ ನಲ್ಲಿ ಪ್ರಾರಂಭಿಸಿದೆ.
ಇತ್ತೀಚೆಗೆ ಸೇರ್ಪಡೆಯಾದ `ಐ ಹ್ಯಾವ್ ಸ್ಪೇಸ್’ ಮಳಿಗೆಯು ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಅನುಕೂಲಕರ ಅನುಭವ ನೀಡುವ ಮತ್ತು ಸಣ್ಣ ಉದ್ಯಮಗಳಿಗೆ ಹೆಚ್ಚುವರಿ ಗಳಿಕೆಯ ಅವಕಾಶಗಳ ಮೂಲಕ ಸಬಲೀಕರಿಸುವ ಅಮೆಜಾನ್ ಇಂಡಿಯಾದ ಬದ್ಧತೆಗೆ ಪೂರಕವಾಗಿದೆ. ಶ್ರೀನಗರ ಮೂಲದ ಮುರ್ತಾಜಾ ಖಾನ್ ಕಾಶಿ ಅವರು ಸೆಲೆಕ್ ಟೌನ್ ಎಂಬ ಹೆಸರಿನ ದೋಣಿಮ ನೆಯ ಮಾಲೀಕತ್ವ ಮತ್ತು ಕಾರ್ಯ ನಿರ್ವಹಣೆ ಹೊಂದಿದ್ದು ಅವರು ದಾಲ್ ಲೇಕ್ ಮತ್ತು ನಿಗೀನ್ ಲೇಕ್ ಗಳಲ್ಲಿ ಮತ್ತು ಸುತ್ತಮುತ್ತ ಲಿನ ಅಮೆಜಾನ್ ಗ್ರಾಹಕರಿಗೆ `ಐ ಹ್ಯಾವ್ ಸ್ಪೇಸ್’ ಪಾಲುದಾರರಾಗಿ ಪೂರೈಸುತ್ತಾರೆ.
ಸೆಲೆಕ್ ಟೌನ್ ಅನ್ನು `ಐ ಹ್ಯಾವ್ ಸ್ಪೇಸ್’ ಮಳಿಗೆಯಾಗಿ ಸೇರ್ಪಡೆ ಮಾಡಿ ಕೊಳ್ಳಲು ದಾಲ್ ಲೇಕ್ ಮತ್ತು ನಿಗೀನ್ ಲೇಕ್ ನಲ್ಲಿ ಹಾಗೂ ಸುತ್ತಮುತ್ತಲಲ್ಲಿ ವಾಸಿಸುವ ಮತ್ತು ವ್ಯಾಪಾರ ನಿರ್ವಹಿಸುವ ನೂರಾರು ಗ್ರಾಹಕರು ಎದುರಿಸುತ್ತಿರುವ ಸವಾಲುಗಳೇ ಕಾರಣವಾಗಿದ್ದು ಇವು ಪ್ರವಾಸಿಗರು ಮತ್ತು ಸ್ಥಳೀಯರಿಂದ ಅತ್ಯಂತ ಹೆಚ್ಚು ಭೇಟಿ ನೀಡುವ ಸ್ಥಳಗಳಾಗಿವೆ. ಹಿಂದೆ ಈ ಗ್ರಾಹಕರು ಶಿಖಾರಗಳ ಮೂಲಕ ಈ ಎರಡೂ ಕೊಳಗಳ ತೀರಕ್ಕೆ ಪ್ರಯಾಣಿಸ ಬೇಕಾಗಿತ್ತು ಅಥವಾ ಅವರ ಪ್ಯಾಕೇಜ್ ಗಳನ್ನು ಸಂಗ್ರಹಿಸಿ ಕೊಳ್ಳಲು ಹತ್ತಿರದ ಮಳಿಗೆಗಳಿಗೆ ಹೋಗಬೇಕಿತ್ತು. ಸೆಲೆಕ್ ಟೌನ್ ಮೂಲಕ ಮುರ್ತಾಜಾ ಅವರು ಪ್ರತಿನಿತ್ಯ ಈ ಗ್ರಾಹಕರಿಗೆ ಸುರಕ್ಷಿತವಾಗಿ ಮತ್ತು ಸಕಾಲಕ್ಕೆ ಅವರ ಮನೆಬಾಗಿಲಿಗೆ ಈ ಪ್ಯಾಕೇಜ್ ಗಳನ್ನು ತಲುಪಿಸುತ್ತಾರೆ.
ಭಾರತದ ಅಮೆಜಾನ್ ಲಾಜಿಸ್ಟಿಕ್ಸ್ ನಿರ್ದೇಶಕ ಡಾ. ಕರುಣಾ ಶಂಕರ್ ಪಾಂಡೆ, “ಭಾರತದ ಮೊದಲ ತೇಲುವ `ಐ ಹ್ಯಾವ್ ಸ್ಪೇಸ್’ ಮಳಿಗೆಯನ್ನು ಶ್ರೀನಗರದ ದಾಲ್ ಲೇಕ್ ನಲ್ಲಿ ಸೇರ್ಪಡೆ ಮಾಡಿಕೊಳ್ಳಲು ಬಹಳ ರೋಮಾಂಚಿತರಾಗಿದ್ದೇವೆ. ಇದು ನಮಗೆ ಶ್ರೀನಗರದಾದ್ಯಂತ ವಿಶ್ವಾಸಾರ್ಹ, ದಕ್ಷ ಮತ್ತು ವೇಗದ ಪೂರೈಕೆಗಳನ್ನು ಒದಗಿಸಲು ಸನ್ನದ್ಧವಾಗಿಸುತ್ತದೆ. ಇದು ವ್ಯಕ್ತಿಗಳಿಗೆ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸುವಲ್ಲಿ ನಮ್ಮ ಬದ್ಧತೆಯನ್ನು ಮರು ದೃಢೀಕರಿಸುತ್ತದೆ ಮತ್ತು ನಮ್ಮ ಡೆಲಿವರಿ ಜಾಲವನ್ನು ಸದೃಢಗೊಳಿಸಲು ಹೊಸ ಸಾಮರ್ಥ್ಯಗಳನ್ನು ಪರಿಚಯಿಸುತ್ತದೆ” ಎಂದರು.
ದಾಲ್ ಲೇಕ್ ನಲ್ಲಿ ಕಾರ್ಯಾಚರಣೆ ಪ್ರಾರಂಭಿಸುವ ಮೂಲಕ ಮುರ್ತಾಜಾ ಅವರು ದಾಲ್ ಲೇಕ್ ಮತ್ತು ನಿಗೀನ್ ಲೇಕ್ ಒಳಗಡೆ ಹಾಗೂ ಸುತ್ತಮುತ್ತಲಿನಲ್ಲಿ ವಾಸಿಸುವ ಗ್ರಾಹಕರಿಗೆ ವಿಶ್ವಾಸಾರ್ಹ ಪೂರೈಕೆಗಳನ್ನು ಮಾಡುವ ಮೂಲವಾಗಿದ್ದಾರೆ. ಮುರ್ತಾಜಾ ಅವರಿಗೆ `ಐ ಹ್ಯಾವ್ ಸ್ಪೇಸ್’ ಕಾರ್ಯಕ್ರಮವು ಸಬಲೀಕರಣ ಮತ್ತು ಹೆಚ್ಚುವರಿ ಆದಾಯದ ಪ್ರಯಾಣವಾಗಿದೆ.
“ನನ್ನ ಪ್ರಾಥಮಿಕ ಉದ್ಯಮವಾಗಿ ನನಗೆ ದೋಣಿಮನೆಯಿದೆ, ಇದು ಶ್ರೀನಗರಕ್ಕೆ ಆಗಮಿಸುವ ಪ್ರವಾಸಿಗರಿಂದ ಋತು ಆಧರಿತ ಆದಾಯ ಮಾತ್ರ ತಂದುಕೊಡುತ್ತದೆ. ಆದರೆ ದೋಣಿಮನೆಯನ್ನು ನಿರ್ವಹಿಸುವ ವೆಚ್ಚ ಬಹಳ ಹೆಚ್ಚಾಗಿರುವುದರಿಂದ ನಮ್ಮ ಕುಟುಂಬಕ್ಕೆ ಬಹಳ ಕಷ್ಟಕರವಾಗಿತ್ತು. ಹೆಚ್ಚುತ್ತಿರುವ ವೆಚ್ಚಗಳನ್ನು ನಿಭಾಯಿಸಲು ನಾನು ಹೆಚ್ಚುವರಿ ಆದಾಯದ ಅವಕಾಶಗಳ ಅನ್ವೇಷಣೆಯಲ್ಲಿದ್ದೆ. ಆಗ ನನಗೆ ಅಮೆಜಾನ್ ನ `ಐ ಹ್ಯಾವ್ ಸ್ಪೇಸ್’ ಕಾರ್ಯಕ್ರಮದ ಬಗ್ಗೆ ತಿಳಿಯಿತು, ಅದು ನನ್ನಂತಹ ಸ್ಥಳೀಯ ಅಂಗಡಿ ಮಾಲೀಕರಿಗೆ ಅಮೆಜಾನ್ ಗ್ರಾಹಕರಿಗೆ ಅವರ ಉತ್ಪನ್ನಗಳನ್ನು ಒದಗಿಸುವ ಮೂಲಕ ನಿಯಮಿತ ಆದಾಯಕ್ಕೆ ನೆರವಾಗುತ್ತದೆ. ನನ್ನ ಬಿಡುವಿನ ಸಮಯವನ್ನು ಬಳಸಿಕೊಳ್ಳಲು ಇದು ನನಗೆ ಅತ್ಯಂತ ಸೂಕ್ತವಾಗಿದೆ ಎಂದು ನಾನು ಭಾವಿಸಿದೆ, ಇದು ನನ್ನ ಶಿಖರದ ಮೂಲಕ ಅಮೆಜಾನ್ ಗ್ರಾಹಕರಿಗೆ ಪ್ಯಾಕೇಜ್ ಗಳನ್ನು ಪೂರೈಸುವುದು ಮತ್ತು ಹೆಚ್ಚುವರಿ ಆದಾಯವನ್ನೂ ಪಡೆಯಬಹುದಾಗಿದೆ” ಎಂದು ಮುರ್ತಾಜಾ ಖಾನ್ ಕಾಶಿ ಹೇಳಿದರು.
ಅಮೆಜಾನ್ ದೇಶಾದ್ಯಂತ ತನ್ನ ಡೆಲಿವರಿ ಜಾಲವನ್ನು ವಿಸ್ತರಿಸುತ್ತಿದ್ದತೆ ಇದು ವ್ಯಕ್ತಿಗಳಿಗೆ ಅವರ ಉದ್ಯಮಶೀಲತೆಯ ಅವಕಾಶಗಳನ್ನು ಅನಾವರಣಗೊಳಿಸಲು ಮತ್ತು ಕೊನೆಯ ಹಂತದ ಡೆಲಿವರಿ ಕಾರ್ಯಕ್ರಮ `ಐ ಹ್ಯಾವ್ ಸ್ಪೇಸ್’ ದ ಮೂಲಕ ಅವರ ದಿಗಂತಗಳನ್ನು ವಿಸ್ತರಿಸುವ ಮೂಲಕ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ಈ ಕಾರ್ಯಕ್ರಮದ ಮೂಲಕ ಅಮೆಜಾನ್ ಇಂಡಿಯಾ ಸ್ಥಳೀಯ ಮಳಿಗೆಗಳು ಮತ್ತು ಉದ್ಯಮದ ಮಾಲೀಕರೊಂದಿಗೆ ಸಹಯೋಗ ಹೊಂದಿದ್ದು ಅವರ ಮಳಿಗೆಯ ಸುತ್ತಮುತ್ತಲಿನ 2ರಿಂದ 4 ಕಿಲೋಮೀಟರ್ ಸುತ್ತಲೂ ಉತ್ಪನ್ನಗಳನ್ನು ಪೂರೈಸಲು ತ್ತು ಅವರಿಗೆ ಹೆಚ್ಚುವರಿ ಆದಾಯ ಪಡೆದುಕೊಳ್ಳಲು ಸನ್ನದ್ಧವಾಗಿಸುತ್ತದೆ. 2015ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಭಾರತದಲ್ಲಿ 420 ಪಟ್ಟಣಗಳು ಮತ್ತು ನಗರಗಳಲ್ಲಿ 28,000ಕ್ಕೂ ಹೆಚ್ಚು ನೆರೆಹೊರೆಯ ಮತ್ತು ಕಿರಾಣಿ ಅಂಗಡಿಗಳನ್ನು ಹೊಂದಿದೆ.