ವನಮಾ ವೆಂಕಟೇಶ್ವರ ರಾವ್ ಅನರ್ಹ: ಶಾಸಕರಾಗಿ ಜಲಗಂ ವೆಂಕಟರಾವ್ ಆಯ್ಕೆ
ಹೈದರಾಬಾದ್:ಕಳೆದ 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ತೆಲಂಗಾಣದ ಕೊತ್ತ ಗುಡೆಂ ಕ್ಷೇತ್ರದಲ್ಲಿ ರಾವ್ ಅವರ ವಿರುದ್ಧ ಸ್ಫರ್ಧಿಸಿ ಎರಡನೇ ಸ್ಥಾನ ಪಡೆದು ಕೊಂಡಿದ್ದ ಜಲಗಂ ವೆಂಕಟರಾವ್ ಅವರನ್ನು ಶಾಸಕರನ್ನಾಗಿ ನ್ಯಾಯಾಲಯ ಆಯ್ಕೆ ಮಾಡಿದೆ.
ತೆಲಂಗಾಣ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಇರುವ ಸಂದರ್ಭದಲ್ಲೇ ಅಲ್ಲಿನ ಹೈಕೋರ್ಟ್ ಆಡಳಿತರೂಢ ಬಿಆರ್‌ಎಸ್ ಪಕ್ಷದ ಶಾಸಕ ವನಮಾ ವೆಂಕಟೇಶ್ವರ ರಾವ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ.
ಮೂಲತಃ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದ ವನಮಾ ವೆಂಕಟೇಶ್ವರ ರಾವ್ , ನಂತರ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಕ್ರಮದಿಂದ ತಪ್ಪಿಸಿ ಕೊಳ್ಳುವ ಮೂಲಕ ಇತರ 12 ಶಾಸಕರೊಂದಿಗೆ ಬಿಆರ್ ಎಸ್‍ಗೆ ಸೇರಿದ್ದರು.
ಚುನಾವಣೆಯಲ್ಲಿ ಸೋತ ಅಭ್ಯರ್ಥಿ, ಅವರು ವೆಂಕಟೇಶ್ವರ ರಾವ್ ಅವರು ತಮ್ಮ ಪತ್ನಿ ಹೊಂದಿರುವ ಆಸ್ತಿಯ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ವೆಂಕಟೇಶ್ವರ ರಾವ್ ಅವರು ಶಾಸಕರಾಗಿದ್ದ ಅವಯಲ್ಲಿ ಭತ್ಯೆ ಸೇರಿದಂತೆ ಮಾಸಿಕ ಸುಮಾರು 3 ಲಕ್ಷ ಹಣ ಪಡೆದುಕೊಂಡಿದ್ದರು ಇದೀಗ ನ್ಯಾಯಮೂರ್ತಿ ರಾಧಾ ರಾಣಿ ಅವರಿಗೆ 5 ಲಕ್ಷ ದಂಡ ವಿಧಿಸಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ, ರಾಜ್ಯ ಅಬಕಾರಿ ಸಚಿವ ವಿ ಶ್ರೀನಿವಾಸ್ ಗೌಡ್ ಅವರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿತು, ಇದರಲ್ಲಿ ಅವರು 2018 ರಲ್ಲಿ ಚುನಾವಣಾ ಅಫಿಡವಿಟ್ ಟ್ಯಾಂಪರಿಂಗ್ ಆರೋಪದ ವಿರುದ್ಧದ ಅರ್ಜಿಯನ್ನು ಅಮಾನತುಗೊಳಿಸುವಂತೆ ನ್ಯಾಯಾಲಯವನ್ನು ಕೋರಿದ್ದರು.
ಮೂರನೇ ಪ್ರಕರಣದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಮದನ್ ಮೋಹನ್ ರಾವ್ ಅವರ ಅರ್ಜಿಯ ವಿಚಾರಣೆಯನ್ನು ಅನುಮತಿಸುವ ತೆಲಂಗಾಣ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಜಹೀರಾಬಾದ್‍ನ ಬಿಆರ್‍ಎಸ್ ಸಂಸದ ಬಿಬಿ ಪಾಟೀಲ್ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಪಾಟೀಲ್ ಅವರು 2019ರ ಲೋಕಸಭೆ ಚುನಾವಣೆ ವೇಳೆ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.