ಸ್ಮಶಾನದಲ್ಲೇ ಮಗಳ ಮದುವೆ ಮಾಡಿದ ತಂದೆ
ಅಹಮದ್‌ನಗರ:ಶವಸಂಸ್ಕಾರವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅಂತಿಮ ಯಾತ್ರೆ ಯಾಗಿದೆ.
ಆದರೆ, ಒಬ್ಬ ತಂದೆ ತನ್ನ ಮಗಳ ಮದುವೆಯನ್ನು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಹ್ತಾ ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ಮಶಾನದಲ್ಲೇ ನೆರವೇರಿಸಿರುವ ಘಟನೆ ನಡೆದಿದೆ.
ಸ್ಮಶಾನದಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ವೈದಿಕ ಮಂತ್ರಗಳ ನಡುವೆ ಈ ಮದುವೆ ನಡೆದಿದೆ. ತಂದೆಯು ಮೂಢನಂಬಿಕೆ ಗಳನ್ನು ಧಿಕ್ಕರಿಸಿ ನೇರವಾಗಿ ಸ್ಮಶಾನವನ್ನೇ ಮದುವೆ ಮಂಟಪವನ್ನಾಗಿ ಮಾಡಿದ್ದಾರೆ.
ರಹತಾ ಪಟ್ಟಣದ ನಿವಾಸಿ ಗಂಗಾಧರ ಗಾಯಕವಾಡ ವಾಚ್‌ಮನ್ ಆಗಿ ಕೆಲಸ ಮಾಡು ತ್ತಿದ್ದು, ಹಲವು ವರ್ಷಗಳಿಂದ ಕುಟುಂಬ ಸಮೇತ ಚಿತಾಗಾರದಲ್ಲಿ ವಾಸವಾಗಿದ್ದಾರೆ. ಇತರರು ಅಶುಭವೆಂದು ಪರಿಗಣಿಸುವ ಶವಸಂಸ್ಕಾರವು ಮಹಾಸಂಜೋಗಿ ಕುಟುಂಬದ ಜೀವನಾಧಾರವಾಗಿದೆ.
ಗಂಗಾಧರ್ ಅವರ ಮಗಳು ಮಯೂರಿ ಅಲ್ಲೇ ಇದ್ದು ಇಂಟರ್ ವರೆಗೆ ಓದಿದ್ದಳು. ಮಯೂರಿಯ ವಿದ್ಯಾಭ್ಯಾಸ ಮುಗಿದ ನಂತರ ಗಂಗಾಧರ್ ಮಗಳ ಮದುವೆ ಮಾಡಲು ನಿರ್ಧರಿಸಿದ. ಆದರೆ, ಶಿರಸಿಯ ಮನೋಜ್ ಎಂಬ ಯುವಕನನ್ನು ಪ್ರೀತಿಸುತ್ತಿರುವುದಾಗಿ ಮಗಳು ಹೇಳಿದಾಗ ಆತನನ್ನು ಮದುವೆಯಾಗಲು ಒಪ್ಪಿದ್ದ.
ನಗರದ ಬಂಧು ಮಿತ್ರರ ಸಮ್ಮುಖದಲ್ಲಿ ಮಯೂರಿ ಮತ್ತು ಮನೋಜ್ ಮದುವೆ ಅದ್ಧೂರಿಯಾಗಿ ನೆರವೇರಿತು. ಸಂಗೀತ ಮತ್ತು ಬಾರಾತ್ ಆಚರಣೆಗಳು ನಡೆದವು. ಈ ಮದುವೆಗೆ ಗ್ರಾಮಸ್ಥರೂ ಸಹಕರಿಸಿದ್ದಾರೆ. ಮದುವೆ ಸಮಾರಂಭದಲ್ಲಿ ನಗರದ ಮಾಜಿ ಮೇಯರ್‌ಗಳು ಹಾಗೂ ಮುಖಂಡರು ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದರು.
ಸಾಮಾಜಿಕ ಕಾರ್ಯಕರ್ತ ದಶರತ್ ತುಪೆ ಅವರು ವಿವಾಹದಲ್ಲಿ ಪಾಲ್ಗೊಂಡು ಗಂಗಾಧರ್ ಅವರ ಪ್ರಯತ್ನವನ್ನು ಶ್ಲಾಘಿಸಿದರು.