ವೇತನ ವಿಳಂಬ: ಡೊನ್ಜೊ ಕಂಪನಿಯಿಂದ ವಾರ್ಷಿಕ ಬಡ್ಡಿ ಭರವಸೆ….!
ಮುಂಬೈ:ಡೊನ್ಜೊ ನಗದು ಕೊರತೆ ಕಾರಣದಿಂದಾಗಿ ಜೂನ್ ತಿಂಗಳಿನಿಂದ ವೇತನ ವನ್ನು ತಡೆ ಹಿಡಿದಿದೆ. ಈ ನಡುವೆ ಡೊನ್ಜೊ ತನ್ನ ಉದ್ಯೋಗಿಗಳ ಭರವಸೆಯನ್ನು ಪಡೆಯುವ ಪ್ರಯತ್ನವನ್ನು ಮಾಡುತ್ತಿದೆ. ಡೊನ್ಜೊ ಬಾಕಿ ಇರುವ ತನ್ನ ವೇತನದ ಮೇಲೆ ಶೇ.12 ರಷ್ಟು ವಾರ್ಷಿಕ ಬಡ್ಡಿ ನೀಡುವ ಭರವಸೆ ನೀಡಿದೆ.
ಇನ್ನು ಸೆಪ್ಟೆಂಬರ್ 4 ರ ಒಳಗಾಗಿ ಡೊನ್ಜೊ ತನ್ನ ಉದ್ಯೋಗಿಗಳಿಗೆ ವೇತನವನ್ನು ನೀಡು ವ ಭರವಸೆಯನ್ನು ನೀಡಿದೆ. ಈ ವೇತನಕ್ಕೆ ಶೇಕಡ 12ರಷ್ಟು ವಾರ್ಷಿಕ ಬಡ್ಡಿಯನ್ನು ನೀಡುವ ಭರವಸೆಯನ್ನು ನೀಡಿದೆ. ಡೊನ್ಜೊ ವೇತನದಾರರ ತಂಡವು ಉದ್ಯೋಗಿಗಳಿಗೆ ಇಮೇಲ್ ಮೂಲಕ ಭರವಸೆ ನೀಡಿದೆ.
ಸಂಬಳದಲ್ಲಿ ವಿಳಂಬದಿಂದಾಗಿ ಉಂಟಾದ ಸಮಸ್ಯೆಯನ್ನು, ಅನಾನುಕೂಲತೆಯನ್ನು ನಾವು ಅರ್ಥಮಾಡಿಕೊಂಡಿ ದ್ದೇವೆ. ನಾವು ಅದನ್ನು ಖಚಿತಪಡಿಸಿಕೊಳ್ಳಲು ಬಯಸು ತ್ತೇವೆ. ನಾವು ವಿಳಂಬಕ್ಕೆ ಬೆಂಬಲವಾಗಿ ಬಡ್ಡಿದರ ನೀಡಲು ನಿರ್ಧಾರ ಮಾಡಿದ್ದೇವೆ,” ಎಂದು ವರದಿ ಮಾಡಿದೆ.
ಪ್ರಸ್ತುತ ಡೊನ್ಜೊ ಹಣಕಾಸಿನ ಸವಾಲನ್ನು ಎದುರಿಸುತ್ತಿದೆ. ನಗದು ಕೊರತೆಯ ಕಾರಣದಿಂದಾಗಿ ಕಂಪನಿಯು ತನ್ನ ಉದ್ಯೋಗಿ ಗಳಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ಡೊನ್ಜೊದಲ್ಲಿ ವೇತನವನ್ನು ವಿಳಂಬ ಮಾಡಲಾಗು ತ್ತಿದೆ. ಜುಲೈ 3 ರಂದು ಡೊನ್ಜೊ ತನ್ನ ಉದ್ಯೋಗಿಗಳ ಪೈಕಿ 500 ಮಂದಿಗೆ ಸಂಬಳವನ್ನು ಮುಂದೂಡಿದೆ. 500 ಉದ್ಯೋಗಿಗಳಿಗೆ ವೇತನ ನೀಡಿದೆ.