 : ಹುಟ್ಟುಹಬ್ಬದ ಸರ್ಪ್ರೈಸ್ ಎಂದು ಯುವಕನ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ ಸ್ನೇಹಿತರು!
ಯಾವುದೇ ಸಂತೋಷ ಕ್ಷಣಗಳನ್ನು ಆಚರಿಸುವಾಗ ಜನರು ಮೊದಲು ತಮ್ಮ ಪ್ರೀತಿ ಪಾತ್ರರಿಗೆ ಸರ್ಪ್ರೈಸ್ ನೀಡಲು ಮುಂದಾಗುತ್ತಾರೆ. ಕೆಲವೊಂದು ಸರ್ಪ್ರೈಸ್ ಗಳು ತುಂಬಾ ಆಶ್ಚರ್ಯಕರವಾಗಿದ್ದರೆ, ಕೆಲವೊಂದು ಸರ್ಪ್ರೈಸ್‌ಗಳು ತುಂಬಾ ಆಘಾತಕಾರಿಯಾಗಿರುತ್ತದೆ. ಇಂತಹ ಅಘಾತಕಾರಿ ಸರ್ಪ್ರೈಸ್ ವಿಡಿಯೊ ಒಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ( ) ಆಗಿದೆ.
ಸ್ನೇಹಿತರು ಯುವಕನಿಗೆ ಹುಟ್ಟುಹಬ್ಬದ ಸರ್ಪ್ರೈಸ್ ನೀಡಲು ಆತ ಮಲಗಿದ್ದಾಗ ಮಾಡಿದ ಘನಕಾರ್ಯವನ್ನು ನೋಡಿದವರು ಭಯಭೀತರಾಗುವುದಂತೂ ಖಂಡಿತ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ‘ಘರ್ ಕಾ ಕಾಲೇಶ್’ ಖಾತೆಯಿಂದ ಹಂಚಿಕೊಳ್ಳಲಾದ ಈ ವೈರಲ್ ವಿಡಿಯೊದಲ್ಲಿ ಸ್ನೇಹಿತರು ತಮಾಷೆ ಮಾಡಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದನ್ನು ತೋರಿಸಿದೆ.
💀😭../LxRDkViEg0
ಈ ವೈರಲ್ ವಿಡಿಯೊದಲ್ಲಿ ಯುವಕನೊಬ್ಬ ಗಾಢ ನಿದ್ರೆಯಲ್ಲಿ ಹಾಸಿಗೆಯಲ್ಲಿ ಮಲಗಿದ್ದಾನೆ ಮತ್ತು ಅವನ ಸ್ನೇಹಿತರು ಹುಟ್ಟುಹಬ್ಬದ ಸರ್ಪ್ರೈಸ್ ನೀಡಲು ಯೋಚಿಸಿ ಅವನನ್ನು ತಮಾಷೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದರಂತೆ ಅವರೆಲ್ಲರೂ ಸ್ಪ್ರೇ ಕ್ಯಾನ್‌ನೊಂದಿಗೆ ಅವನ ರೂಂಗೆ ಬಂದು ಮಲಗಿದ್ದ ಯುವಕನ ಪ್ಯಾಂಟಿನ ಕೆಳಭಾಗಕ್ಕೆ ಚೆಲ್ಲಿ ಲೈಟರ್‌ನಿಂದ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹೊತ್ತಿ ಉರಿಯುವಾಗ ಅವರು “ಹ್ಯಾಪಿ ಬರ್ತ್ ಡೇ ಟು ಯು” ಹಾಡನ್ನು ಹಾಡಿದ್ದಾರೆ. ಆಗ ಎಚ್ಚರಗೊಂಡ ಯುವಕ ತನ್ನ ಖಾಸಗಿ ಭಾಗದ ಬಳಿ ಬೆಂಕಿ ಉರಿಯುವುದನ್ನು ಕಂಡು ಹೌಹಾರಿ ಅದನ್ನು ಆರಿಸಿಕೊಂಡು ಕೋಪದಿಂದ ತನ್ನ ಸ್ನೇಹಿತರನ್ನು ಬೆನ್ನಟ್ಟಿ ಹೊಡೆದು ಕೊನೆಗೆ ಸಮಾಧಾನಗೊಂಡು ಸ್ನೇಹಿತರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ.
ಇದನ್ನೂ ಓದಿ:ʼನಿನ್ನೇ ಪ್ರೀತಿಸುವೆʼ ಎಂದು 52 ವರ್ಷದ ಪ್ರೊಫೆಸರ್‌ ಅನ್ನು ಮದುವೆಯಾದ 20 ವರ್ಷದ ವಿದ್ಯಾರ್ಥಿನಿ!
ಇಂತಹ ಮರೆಯಲಾಗದ ಹುಟ್ಟುಹಬ್ಬದ ಸರ್ಪ್ರೈಸ್ ಅನ್ನು ಯಾರೂ ತಮ್ಮ ಜೀವಮಾನದಲ್ಲಿ ಮಾಡಿರಲಾರರು. ಆದರೆ ಒಬ್ಬರ ಜೀವದ ಜೊತೆ ಆಟವಾಡುವಂತಹ ಇಂತಹ ತಮಾಷೆಯನ್ನು ಎಂದಿಗೂ ಮಾಡಬಾರದು. ಯಾಕೆಂದರೆ ಇದು ಕೆಲವೊಮ್ಮೆ ಅನಾಹುತಕ್ಕೆ ಕಾರಣವಾಗಬಹುದು. ಕೆಲವು ಕ್ಷಣದ ಸಂತೋಷಕ್ಕಾಗಿ ಒಬ್ಬರ ಜೀವವನ್ನು ಪಣಕ್ಕೆ ಇಡಬಾರದು. ಹಾಗಾಗಿ ಇಂತಹ ಸ್ನೇಹಿತರ ಜೊತೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಈ ವಿಡಿಯೊ ತಿಳಿಸುತ್ತದೆ.