25,000 ನಿಷೇಧಿತ ವಸ್ತುಗಳ ವಶ: ಪವರ್ ಬ್ಯಾಂಕ್’ನದ್ದೇ ಸಿಂಹಪಾಲು
ನವದೆಹಲಿ:ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ದೈನಂದಿನ ಪ್ರಯಾಣಿಕರ ತಪಾಸಣೆ ವೇಳೆ, ಸುಮಾರು 25,000 ನಿಷೇಧಿತ ವಸ್ತುಗಳನ್ನು ಭದ್ರತಾ ಏಜೆನ್ಸಿ ಸಿಬ್ಬಂದಿ ವಶಕ್ಕೆ ಪಡೆಯುತ್ತಾರೆ. ಪವರ್ ಬ್ಯಾಂಕ್ ಅನ್ನು ಹೆಚ್ಚಿನ ಪ್ರಯಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ ಸೋಮವಾರ ಮಾಹಿತಿ ನೀಡಿದೆ.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ ಮಹಾನಿರ್ದೇಶಕ ಜುಲ್ಫಿಕರ್ ಹಸನ್ ಅವರು ದೆಹಲಿಯ ಪ್ರಧಾನ ಕಛೇರಿಯಲ್ಲಿ ನಡೆದ ಏವಿಯೇಷನ್ ಸೆಕ್ಯುರಿಟಿ ಕಲ್ಚರ್ ವೀಕ್-2023ಗೆ ಚಾಲನೆ ನೀಡಿ, ವಿಮಾನ ನಿಲ್ದಾಣದಲ್ಲಿನ ಭದ್ರತೆ ಕುರಿತು ಮಾತನಾಡಿದರು.
ಪ್ರತಿನಿತ್ಯ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸುಮಾರು ಎಂಟು ಲಕ್ಷ ಹ್ಯಾಂಡ್‌ಬ್ಯಾಗ್‌ಗಳನ್ನು ಮತ್ತು ಐದು ಲಕ್ಷ ಚೆಕ್-ಇನ್ ಬ್ಯಾಗೇಜ್‌ಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸುತ್ತಾರೆ. ತಪಾಸಣೆ ಮಾಡುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ವಿಮಾನಯಾನ ಪ್ರಯಾಣಿಕ್ಕೆ ಅಕವಾಶವಿಲ್ಲದ ಸುಮಾರು 25,000 ನಿಷೇಧಿತ ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯುತ್ತಾರೆ ಎಂದು ತಿಳಿಸಿದರು.
ಪ್ರಯಾಣಿಕರು ಪ್ರವೇಶದ ವೇಳೆ ಸುಮಾರು ಚೆಕ್-ಇನ್ ಬ್ಯಾಗೇಜ್‌ನಲ್ಲಿ ನಿಷೇಧಿತ ವಸ್ತುಗಳಲ್ಲಿ ಹೆಚ್ಚು ಕಂಡು ಬರುವುದು ಪವರ್ ಬ್ಯಾಂಕ್‌ಗಳು. ಅದರ ಪ್ರಮಾಣ ಶೇ.44ರಷ್ಟಿದ್ದರೆ, ಹಗುರವಾದ ನಿಷೇಧಿ ವಸ್ತುಗಳ ಪತ್ತೆ ಶೇಕಡಾ 19 ರಷ್ಟಿದೆ. ಇನ್ನೂ ಸಡಿಲವಾದ ಬ್ಯಾಟರಿಗಳು ಶೇ.18ರಷ್ಟು, ಶೇ.11ರಷ್ಟು ಪ್ರಮಾಣದಲ್ಲಿ ಲ್ಯಾಪ್‌ಟಾಪ್‌ ಗಳನ್ನು ಸಿಬ್ಬಂದಿ ವಶಕ್ಕೆ ಪಡೆಯುತ್ತಾರೆ ಎಂದರು.
3,300 ವಿಮಾನಗಳಲ್ಲಿ ಪ್ರತಿದಿನ 4.8 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ವಾಯುಯಾನಕ್ಕೆ ಇತ್ತಿಚೆಗೆ ಬರುತ್ತಿರುವ ಬೆದರಿಕೆಗಳ ಕುರಿತು ವಿವರಿಸಿದ ಹಸನ್ ಅವರು, ಸೈಬರ್ ಬೆದರಿಕೆ, ಡ್ರೋನ್‌ ಒಳಗೊಂಡ ಸೈಬರ್ ಬೆದರಿಕೆಗಳು ಹೆಚ್ಚು ಬರುತ್ತವೆ.