 : ಸೇನೆಯನ್ನು ಗುರಿಯಾಗಿಸಿ ಭೀಕರ ದಾಳಿಗೆ ಭಾರೀ ಸಂಚು? ಸ್ಫೋಟಕ ಸಾಧನ ಪತ್ತೆ
ಶ್ರೀನಗರ:ಜಮ್ಮು ಮತ್ತು ಕಾಶ್ಮೀರ(-)ದಲ್ಲಿ ಶನಿವಾರ ರಾತ್ರಿ ಸ್ಫೋಟಕ ಸಾಧನವೊಂದು ಪತ್ತೆಯಾಗಿದೆ. ಪೊಲೀಸರು ಶನಿವಾರ ಜಮ್ಮು ಜಿಲ್ಲೆಯ ಘರೋಟಾ ಪ್ರದೇಶದಲ್ಲಿ ಒಂದು ಶಂಕಿತ ಸುಧಾರಿತ ಸ್ಫೋಟಕ ಸಾಧನವನ್ನು ( ) ಪತ್ತೆ ಮಾಡಿದ್ದಾರೆ. ಮಾಹಿತಿ ಪಡೆದ ಕೂಡಲೇ ಭದ್ರತಾ ಪಡೆಗಳು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಘಟನಾ ಸ್ಥಳಕ್ಕೆ ದೌಡಾಯಿಸಿ ಅವರನ್ನು ನಿಷ್ಕ್ರೀಯಗೊಳಿಸಿದೆ.
ಘರೋಟಾದ ರಿಂಗ್ ರೋಡ್‌ನಲ್ಲಿ ಪೊಲೀಸ್ ಮತ್ತು ಸೇನೆಯ ಜಂಟಿಯಾಗಿ ಗಸ್ತು ತಿರುಗುವ ವೇಳೆ ಈ ಸ್ಫೋಟಕ ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತರಾದ ಅಧಿಕಾರಿಗಳು ತ್ವರಿತವಾಗಿ ಪ್ರದೇಶವನ್ನು ಸುತ್ತುವರೆದು ಎಲ್ಲಾ ಸಂಚಾರವನ್ನು ಸ್ಥಗಿತಗೊಳಿಸಿದರು ಮತ್ತು ಮುನ್ನೆಚ್ಚರಿಕೆಯಾಗಿ ವಾಹನಗಳ ಸಂಚಾರವನ್ನು ಬೇರೆ ರಸ್ತೆಗೆ ಡೈವರ್ಟ್‌ ಮಾಡಲಾಯಿತು. ತಕ್ಷಣ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಅದನ್ನು ನಿಷ್ಕ್ರೀಯಗೊಳಿಸಲಾಗಿದೆ.
ಈ ಭಾರೀ ಸ್ಫೋಟಕ ಹೇಗೆ ಪತ್ತೆಯಾಯಿತು, ಯಾರು ತಂದು ಇರಿಸಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸ್ಫೋಟಕ ಬಳಸಿ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಭಾರೀ ಸ್ಫೋಟಕ್ಕೆ ದುಷ್ಕರ್ಮಿಗಳು ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.
#| , &:      , "                    …   -          …"../ids07fW9W6
ಕೆಲವು ದಿನಗಳ ಹಿಂದೆಯಷ್ಟೇ ಕುಪ್ವರಾ ಜಿಲ್ಲೆಯ ಕೇರನ್‌ ಸೆಕ್ಟರ್‌ ( )ನಲ್ಲಿರುವ ಗಡಿ ನಿಯಂತ್ರಣ ರೇಖೆ(  ) ಬಳಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟೀ ಕಾರ್ಯಾಚರಣೆ ವೇಳೆ ಈ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಆಮೂಲಕ ಪ್ರಧಾನಿ ಭೇಟಿ ವೇಳೆ ದಾಳಿಗೆ ಭಾರೀ ಸಂಚು ರೂಪಿಸಲಾಗಿತ್ತುಎಂಬುದು ಬಯಲಾಗಿದೆ.
ಎಕ್ಸ್‌ನಲ್ಲಿ ಸೇನೆ ಪೋಸ್ಟ್‌ವೊಂದನ್ನು ಮಾಡಿದ್ದು, ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಜಂಟೀ ಕಾರ್ಯಾಚರಣೆ ಕೈಗೆತ್ತಿಕೊ‍ಳ್ಳಲಾಗಿತ್ತು. ಈ ವೇಳೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದು ಯುದ್ಧಕ್ಕೆ ಬೇಕಾದಂತಹ ಶಸ್ತ್ರಾಸ್ತ್ರಗಳನ್ನು ಕಂಡು ಸೇನೆ ಶಾಕ್‌ ಆಗಿದೆ. ದಾಳಿ ವೇಳೆ ಎಕೆ 47 ಪಿಸ್ತೂಲ್‌ , ಹ್ಯಾಂಡ್ ಗ್ರೆನೇಡ್‌ಗಳು, ಆರ್‌ಪಿಜಿ ರೌಂಡ್‌ಗಳು, ಸುಧಾರಿತ ಸ್ಫೋಟಕ ಸಾಧನಗಳು, ಮದ್ದು ಗುಂಡುಗಳು ಮತ್ತು ಸ್ಫೋಟಕಗಳು ಪತ್ತೆಯಾಗಿದ್ದು, ಅದನ್ನು ಸೀಜ್‌ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: : ನಸ್ರಲ್ಲಾ ಸಾವಿಗೆ ಸಿರಿಯಾದಲ್ಲಿ ಸಂಭ್ರಮಾಚರಣೆ; ದೂರದ ಜಮ್ಮು-ಕಾಶ್ಮೀರದಲ್ಲೇಕೆ ಶೋಕಾಚರಣೆ?