  : ಲಡ್ಡು ವಿವಾದದ ನಡುವೆಯೇ ತಿರುಪತಿ ಭೇಟಿಗೆ ಜಗನ್‌ ಸಜ್ಜು- ಷರತ್ತು ವಿಧಿಸಿದ ಟಿಡಿಪಿ
ಹೈದರಾಬಾದ್‌:ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (  ) ವಿವಾದದ ನಡುವೆಯೇ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ(   ) ಶನಿವಾರ ತಿರುಪತಿ ದೇಗುಲಕ್ಕೆ ಭೇಟಿ ನೀಡಲು ಸಜ್ಜಾಗಿದ್ದಾರೆ. ಆದರೆ ದೇಗುಲಕ್ಕೆ ಭೇಟಿ ಕೊಡುವ ಮುನ್ನ ಪಾಪ ಪರಿಹಾರ ಮಾಡಿಕೊ‍ಳ್ಳಬೇಕು ಎಂದು ತೆಲುಗು ದೇಶಂ ಪಕ್ಷ() ಪಟ್ಟು ಹಿಡಿದಿದೆ. ಅಲ್ಲದೇ ಕ್ರೈಸ್ತ ಧರ್ಮದವರಾದ ಜಗನ್‌ ಮೋಹನ್‌ ರೆಡ್ಡಿ ಅವರಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇದೆ ಎಂಬ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ತಿರುಮಲ ಲಡ್ಡು, ವೆಂಕಟೇಶ್ವರ ಸ್ವಾಮಿಯ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಚಂದ್ರಬಾಬು ನಾಯ್ಡು ರಾಜಕೀಯ ದುರುದ್ದೇಶದಿಂದ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಿದ್ದಾರೆಂದು ಸುಳ್ಳು ಹೇಳಿದ್ದಾರೆ. ಚಂದ್ರಬಾಬು ನಾಯ್ಡು ಮಾಡಿದ ಈ ಪಾಪವನ್ನು ತೊಡೆದುಹಾಕಲು ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜೆಗಳಲ್ಲಿ ಭಾಗವಹಿಸಲು  ಕರೆ ನೀಡುತ್ತಿದೆ ಎಂದು ಜಗನ್ ಬರೆದುಕೊಂಡಿದ್ದಾರೆ.
నీ కుటుంబం విగ్రహారాధన చేయదు..నువ్వేమో తిరుమలలో అన్యమతస్తులని చైర్మెన్ గా పెట్టావ్..స్వామి వారి విగ్రహాన్ని నల్ల రాయితో పోల్చుతూ, పెకలిస్తా అన్నోడికి చైర్మెన్ పదవి ఇచ్చావ్..చెప్పులు వేసుకుని స్వామి వారి క్యూలైన్ లోకి వెళ్తావ్..ఒక్క రోజు కూడా నాకు స్వామి వారు అంటే నమ్మకం అని…://./
ಇನ್ನು ರೆಡ್ಡಿ ತಿರುಪತಿ ಭೇಟಿ ಬಗ್ಗೆ ಟಿಡಿಪಿ ವಕ್ತಾರ ಕೊಮ್ಮಾರೆಡ್ಡಿ ಪಟ್ಟಾಭಿ ಪ್ರತಿಕ್ರಿಯಿಸಿದ್ದು, ಭಗವಂತ ಬಾಲಾಜಿ ಮೇಲೆ ತಮಗೆ ಅಪಾರ ಬಕ್ತಿ ಇರುವುದಾಗಿ ಘೋಷನಾ ಪತ್ರಕ್ಕೆ ಸಹಿ ಮಾಡದ ಹೊರತು ದೇಗುಲಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಜಗನ್‌ ತಿಳಿಸಿದ್ದಾರೆ.  ನೀವು ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆಯುಳ್ಳವರು ಎಂದು ನಮಗೆಲ್ಲರಿಗೂ ತಿಳಿದಿದೆ, ಅದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂ ಧರ್ಮಕ್ಕೆ ಸೇರಿದವರು, ಅವರು ಭಗವಾನ್ ಬಾಲಾಜಿಯ ದರ್ಶನವನ್ನು ಹೊಂದಲು ಬಯಸಿದರೆ, ಅವರು ಬಾಲಾಜಿಯ ಮೇಲೆ ನಂಬಿಕೆಯನ್ನು ಹೊಂದಿದ್ದಾರೆ ಎಂಬ ಘೋಷಣೆಗೆ ಸಹಿ ಹಾಕಬೇಕು ಎಂದು ರಾಮ್ ಹೇಳಿದರು.
“ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ, ಆದರೆ ಅದೊಂದು ಆಚರಣೆ, ಅದೊಂದು ಪದ್ಧತಿ. ಹಾಗಾಗಿ ಜಗನ್ ಮೋಹನ್ ರೆಡ್ಡಿ, ನೀವು ಘೋಷಣೆಗೆ ಸಹಿ ಹಾಕಬೇಕು, ಇಲ್ಲದಿದ್ದರೆ ದೇವಸ್ಥಾನದ ಸಂಕೀರ್ಣದ ಒಳಗೆ ಹೋಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ:  : ತಿರುಪತಿ ಲಡ್ಡು ವಿವಾದ; ತಮಿಳುನಾಡು ಡೈರಿ ಸಂಸ್ಥೆ ವಿರುದ್ಧ  ದೂರು