ಗಾಯಕ ಶುಭನೀತ್‌ ಸಿಂಗ್‌ ಭಾರತ ಪ್ರವಾಸದ ಟಿಕೆಟ್‌ ಬುಕ್ಕಿಂಗ್‌ ರದ್ದು
ನವದೆಹಲಿ:ಪಂಜಾಬ್‌ ಮೂಲದ ಕೆನಡಾದ ಗಾಯಕ ಶುಭನೀತ್‌ ಸಿಂಗ್‌ ಅವರ ಭಾರತ ಪ್ರವಾಸವನ್ನು ಟಿಕೆಟ್‌ ಬುಕ್ಕಿಂಗ್‌ ಆಯಪ್‌ ‘ಬುಕ್‌ ಮೈ ಷೋ’ ರದ್ದು ಮಾಡಿದೆ.
ಶುಭನೀತ್ ಸಿಂಗ್‌ ಖಾಲಿಸ್ತಾನಿಗಳ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಬುಕ್‌ ಮೈ ಷೋ ಆಯಪ್‌ ಅನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದರು.
ಬಾಯ್ಕಾಟ್‌ ಕೂಗು ಬೆನ್ನಲ್ಲೇ ಕಾರ್ಯಕ್ರಮ ರದ್ದು ಮಾಡಿರುವ ‘ಬುಕ್‌ ಮೈ ಷೋ’ ಆಯಪ್‌, 7-10 ದಿನಗಳಲ್ಲಿ ಟಿಕೆಟ್‌ ಮೊತ್ತವನ್ನು ಸಂಪೂರ್ಣ ಮರುಪಾವತಿ ಮಾಡುವುದಾಗಿ ‘ಎಕ್ಸ್‌’ನಲ್ಲಿ ಬರೆದುಕೊಂಡಿದೆ.
ಇದಕ್ಕೂ ಮುನ್ನ ಬುಧವಾರ ಬೆಳಿಗ್ಗೆ ‘ಎಕ್ಸ್‌’ನಲ್ಲಿ # ಎನ್ನುವ ಹ್ಯಾಷ್‌ಟ್ಯಾಗ್‌ ಟ್ರೆಂಡ್‌ ಆಗಿತ್ತು.