ಅಕ್ಟೋಬರ್ 4ರಿಂದ ಮಾನಿಟರಿ ಪಾಲಿಸಿ ಕಮಿಟಿ ಸಭೆ
ಭಾರತೀಯ ರಿಸರ್ವ್ ಬ್ಯಾಂಕ್​ನ ದ್ವೈಮಾಸಿಕ ಎಂಪಿಸಿ ಸಭೆ ನಾಳೆಯಿಂದ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ (  ) ಪ್ರಸಕ್ತ ಹಣಕಾಸು ಪರಿಸ್ಥಿತಿ ಮತ್ತು ಮುಂದಿನ ಹಣಕಾಸು ನಿರ್ಧಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಸಭೆ ಮುಗಿದ ಬಳಿಕ, ಅಕ್ಟೋಬರ್ 6 ಶುಕ್ರವಾರ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.
ಸಾಮಾನ್ಯವಾಗಿ ಎಂಪಿಸಿ ಸಭೆಯಲ್ಲಿ ರೆಪೋ ದರ ಅಥವಾ ಬಡ್ಡಿದರ ವಿಚಾರವಾಗಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಹೆಚ್ಚಿನ ಮಂದಿಯ ಗಮನ ಇರುತ್ತದೆ. ವಿವಿಧ ಬ್ಯಾಂಕುಗಳ ಬಡ್ಡಿದರಗಳ ಮೇಲೆ ಇದು ನೇರವಾಗಿ ಪ್ರಭಾವಿಸುತ್ತದೆ. ರೆಪೋ ದರ, ರಿವರ್ಸ್ ರೆಪೋ ದರ, ಎಸ್​ಎಲ್​ಆರ್ ಇತ್ಯಾದಿ ದರಗಳಲ್ಲಿ ಈ ಬಾರಿಯೂ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಸದ್ಯ ರೆಪೋ ದರ ಶೇ. 6.5ರಷ್ಟಿದೆ.
ಆರ್​ಬಿಐನ ಅಕಾಮಡೇಟಿವ್ ಸ್ಟಾನ್ಸ್ ಎಂದರೆ ಆರ್ಥಿಕ ಪ್ರಗತಿಗೆ ಪುಷ್ಟಿ ನೀಡಲು ಅಗತ್ಯಬಿದ್ದಲ್ಲಿ ಹಣದ ಸರಬರಾಜನ್ನು ಹೆಚ್ಚಿಸಲು ಸಿದ್ಧವಿರುವುದು ಎಂದಾಗುತ್ತದೆ. ಇದನ್ನು ಹಿಂಪಡೆಯುವುದು ಎಂದರೆ ಹಣದ ಹರಿವನ್ನು ಕಡಿಮೆ ಮಾಡುವುದಾಗಿರುತ್ತದೆ. ರೆಪೋ ದರ ಏರಿಕೆ ಮಾಡದೆಯೇ ಈ ರೀತಿ ಯಾಗಿ ಹಣದುಬ್ಬರ ನಿಯಂತ್ರಿಸಲು ಆರ್​ಬಿಐ ಕ್ರಮ ಕೈಗೊಳ್ಳಲು ಮುಂದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯಲ್ಲಿ ಆರು ಮಂದಿ ಸದಸ್ಯರಿರುತ್ತಾರೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸಮಿತಿ ಮುಖ್ಯಸ್ಥರಾಗಿರುತ್ತಾರೆ.
ಆರು ಮಂದಿ ಎಂಪಿಸಿ ಸದಸ್ಯರ ವಿವರ