ಕೋಸ್ಟಾ ಕಾಫಿ ಪರಿಮಳ ಬೀರುತ್ತಲೇ ಇರುತ್ತದೆ; ನವದೆಹಲಿಯಲ್ಲಿ 150 ನೇ ಮಳಿಗೆ ಪ್ರಾರಂಭ
ನವದೆಹಲಿ:ಭಾರತದ ವಾಣಿಜ್ಯ ಪಾನೀಯ ಬ್ರ್ಯಾಂಡುಗಳಲ್ಲಿ ಒಂದಾದ ಕೋಸ್ಟಾ ಕಾಫಿ, ಕೋಕಾ-ಕೋಲಾದ ಪ್ರಮುಖ ಕಾಫಿ ಬ್ರ್ಯಾಂಡ್.
ಅದೀಗ, ಭಾರತದ ರಾಜಧಾನಿ ನವದೆಹಲಿಯ ರಜೌರಿ ಗಾರ್ಡನ್‌ನಲ್ಲಿ ತನ್ನ 150 ನೇ ಮಳಿಗೆಯನ್ನು ತೆರೆಯುತ್ತಿದೆ. ತನ್ನ ಅಸ್ತಿತ್ವದ ವಿಸ್ತರಣೆಗೆ ಮತ್ತು ಭಾರತದಾದ್ಯಂತ ಇರುವ ಕಾಫಿ ಪ್ರಿಯರಿಗೆ ಅದ್ಭುತ ವಾದ ಕಾಫಿಯ ಅನುಭವ ನೀಡುವುದಕ್ಕೆ ಕೋಸ್ಟಾ ಕಾಫಿ ಸದಾ ಬದ್ಧವಾಗಿದೆ ಎಂಬುದಕ್ಕೆ ಇದೊಂದು ಸಾಕ್ಷಿ.
ಕೋಸ್ಟಾ ಕಾಫಿ, ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದು 2005 ರಲ್ಲಿ. ಅದರ ಮೊದಲ ಕೆಫೆ ಪ್ರಾರಂಭವಾಗಿದ್ದು ನವದೆಹಲಿಯ ಕಾನ್ನಾಟ್ ಪ್ಲೇಸ್‌ನಲ್ಲಿ. ಇದು ಭಾರತದಲ್ಲಿನ ಅದರ ಮೊದಲ ಹೆಜ್ಜೆಯಾಗಿತ್ತು. ದೇವಯಾನಿ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ಕೋಸ್ಟಾ ಕಾಫಿ ಕಳೆದ ವರ್ಷ, ಭಾರತದಲ್ಲಿ ಭಾರಿ ವಿಸ್ತರಣಾ ಯೋಜನೆಯನ್ನು ಕೈಗೊಂಡಿತು; ಸರಿಸುಮಾರು 60 ಮಳಿಗೆಗಳು ಅದರ ಸರಪಳಿಗೆ ಸೇರಿದವು. ಇದೇ ಹುಮ್ಮಸ್ಸಿನಲ್ಲಿ ಕೋಸ್ಟಾ ಕಾಫಿ, ಈಗಾಗಲೆ ಅಸ್ತಿತ್ವದಲ್ಲಿರುವ ಮಾರುಕಟ್ಟೆಗಳ ಜೊತೆಗೆ ದೇಶದಾದ್ಯಂತ ಹೊಸ ನಗರಗಳಲ್ಲಿ ತನ್ನ ಅಸ್ತಿತ್ವವನ್ನು ಕಟ್ಟಿ ಬಲಪಡಿಸುವ ನಿಟ್ಟಿನಲ್ಲಿ 8-10 ಪ್ರಮುಖ ಭಾರತೀಯ ನಗರಗಳಲ್ಲಿ ಹೊಸ ಮಳಿಗೆಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಮತ್ತು ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ ಮಳಿಗೆಗಳನ್ನು ತೆರೆಯುವುದು ಅದರ ಆದ್ಯತೆಯಾಗಿದೆ.
ಭಾರತದ ಕಾಫಿ ಉದ್ಯಮಕ್ಕೆ, ವಿಶೇಷ ಕಾಫಿ ಮತ್ತು ಪ್ರೀಮಿಯಮೀಕರಣದ ಕಡೆಗೆ ವಾಲಬೇಕಾದ ಅಗತ್ಯ ತಲೆದೋರುತ್ತಿದೆ. ಅದರಲ್ಲೂ ವಿಶೇಷ ವಾಗಿ, ಕಾಫಿ ಅಂಗಡಿಗಳನ್ನು ಉತ್ಸಾಹಶೀಲ ಸಮುದಾಯ ಕೇಂದ್ರಗಳನ್ನಾಗಿ ಪರಿವರ್ತಿಸಿರುವ ಮಹಾನಗರಗಳಲ್ಲಿ. ವಿಶೇಷವಾಗಿ, ಚಹಾ ಪಾನಕ್ಕೆ ಹೆಸರುವಾಸಿಯಾಗಿರುವ ಭಾರತ ದೇಶದಲ್ಲಿ ಈ ರೂಪಾಂತರ ಗಮನಾರ್ಹವಾಗಿದೆ. ಕೋಸ್ಟಾ ಕಾಫಿ, ಈ ಬದಲಾವಣೆಯ ಮುಂಚೂಣಿಯಲ್ಲಿದೆ; ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳಿಗೆ ಹೊಂದಿಕೊಳ್ಳುತ್ತ ಚೈತನ್ಯಶೀಲ ಕಾಫಿ ಸಂಸ್ಕೃತಿಯನ್ನು ಪೋಷಿಸುತ್ತದೆ.
ಈ 150 ನೇ ಕೋಸ್ಟಾ ಕಾಫಿ ಮಳಿಗೆ, ಕುಶಲಕೈಗಳಿಂದ ಮತ್ತು ಸ್ಥಳೀಯವಾಗಿ ತಯಾರಿಸಿದ ಕಾಫಿಯನ್ನು ನೀಡಬೇಕೆಂಬ ಕೋಸ್ಟಾ ಕಾಫಿ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕೋಸ್ಟಾ ಕಾಫಿಯ ಕಲಾತ್ಮಕ ಮತ್ತು ನವೀನತೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ಮಳಿಗೆ, ಕಾಫಿ ಪ್ರಿಯರು ಆರಾಮದಾಯಕ ಮತ್ತು ರೋಮಾಂಚಕ ಸ್ಥಳದಲ್ಲಿ ತಮ್ಮ ನೆಚ್ಚಿನ ಪಾನೀಯವನ್ನು ಸವಿಯುವ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಕೋಸ್ಟಾ ಕಾಫಿ, ಭಾರತ ಮತ್ತು ಹೊಸ ಮಾರುಕಟ್ಟೆಗಳ ಜನರಲ್ ಮ್ಯಾನೇಜರ್ ವಿನಯ್ ನಾಯರ್ ಈ ಮಹತ್ವದ ಮೈಲಿಗಲ್ಲನ್ನು ತಲುಪುವ ಬಗೆಗಿನ ತಮ್ಮ ಉತ್ಸಾಹವನ್ನು ಹೀಗೆ ವ್ಯಕ್ತಪಡಿಸಿದ್ದಾರೆ, “ಭಾರತ, ಜಾಗತಿಕವಾಗಿ ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ ಮತ್ತು ಭಾರತದಲ್ಲಿ ನಮ್ಮ 150 ನೇ ಮಳಿಗೆಯನ್ನು ತೆರೆಯಲು ನಾವು ಹೆಮ್ಮೆಪಡುತ್ತೇವೆ. ಈ ಮೈಲಿಗಲ್ಲು, ಭಾರತದಾದ್ಯಂತ ಕಾಫಿ ಪ್ರಿಯರು ನಮಗೆ ನೀಡುತ್ತಿರುವ ಅಗಾಧ ಪ್ರೀತಿ ಮತ್ತು ಬೆಂಬಲಗಳ ದ್ಯೋತಕ. ನಮ್ಮ ಗುರಿ: ರಾಷ್ಟ್ರದ ಪ್ರತಿಯೊಂದು ಮೂಲೆಗೂ ನಮ್ಮ ಅಸ್ತಿತ್ವವನ್ನು ವಿಸ್ತರಿಸುವುದು. ನಿರಂತರ ವಿಸ್ತರಣಾ ಪ್ರಯತ್ನಗಳ ಮೂಲಕ ಈ ಗುರಿಯನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಎಲ್ಲರಿಗೂ ನೆನೆಪಿನಲ್ಲಿ ಉಳಿಯುವಂತಹ ಕಾಫಿ ಅನುಭವಗಳನ್ನು ಖಚಿತವಾಗಿಯೂ ನೀಡುತ್ತೇವೆ.”
ಕೋಸ್ಟಾ ಕಾಫಿಯ ವ್ಯಾಪಕವಾದ ಪಟ್ಟಿಯಲ್ಲಿ:ನೆಚ್ಚಿನ ಫ್ಲ್ಯಾಟ್ ವೈಟ್, ಕ್ಲಾಸಿಕ್ ಕಾರ್ಟೊ, ಕೆಫೆ ಕ್ಯಾರಮೆಲಾ ಮತ್ತು ಇನ್ನೂ ಅನೇಕವು ಇವೆ. ಇದರೊಂದಿಗೆ ಅಂಕಿತ ಕಾಫಿ ಕೊಡುಗೆಗಳ ಶ್ರೇಣಿಯೇ ಇದೆ. ಇವೆಲ್ಲವನ್ನೂ ಸ್ಥಳೀಯ ಕಾಫಿ ಬೀಜಗಳಿಂದ, ಕುಶಲಕರಗಳಿಂದ ಬಹು ಎಚ್ಚರಿಕೆಯಿಂದ ತಯಾರಿಸಲಾಗುತ್ತದೆ. ಸ್ಥಳೀಯ ರೈತರು ಮತ್ತು ನುರಿತ ಕಾಫಿ ಕಲಾಕಾರರ ಸಹಕಾರದೊಂದಿಗೆ ತಯಾರಾಗುವ ಕೋಸ್ಟಾ ಕಾಫಿಯ ಪ್ರತಿ ಬಟ್ಟಲೂ ಖಂಡಿತವಾಗಿಯೂ ಗುಣಮಟ್ಟ ಮತ್ತು ಶ್ರೇಷ್ಠತೆಗೆ ಸಾಕ್ಷಿಯಾಗಿರುತ್ತದೆ.