ಉದ್ಯೋಗಿಗಳ ಮೇಲೆ ಹಲ್ಲೆ ಪ್ರಕರಣ: ತೀರ್ಪು ಇಂದು
ನವದೆಹಲಿ :ಉದ್ಯೋಗಿಗಳ ಮೇಲೆ ಹಲ್ಲೆ (2011) ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಗ್ರಾ ನ್ಯಾಯಾ ಲಯವು ಭಾರತೀಯ ಜನತಾ ಪಕ್ಷದ (ಬಿಜೆಪಿ) ಲೋಕಸಭಾ ಸದಸ್ಯ ರಾಮ ಶಂಕರ್ ಕಟೇರಿಯಾ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಆಗಸ್ಟ್ 5 ರಂದು ವಿಧಿಸಿತು.
ಈ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಇಂದು ನ್ಯಾಯಾಧೀಶ ವಿವೇಕ ಸಂಗಲ್ ಅವರು ತೀರ್ಪು ಪ್ರಕಟಿಸಲಿದ್ದಾರೆ.
ಇಟಾವಾ ಬಿಜೆಪಿ ಸಂಸದ ಡಾ. ರಾಮ ಶಂಕರ್ ಕಟೇರಿಯಾ ಅವರಿಗೆ ಕಳೆದ ತಿಂಗಳು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಸೆಪ್ಟೆಂಬರ್ 27, 2023 ರಂದು ಆಗ್ರಾದ ಜಿಲ್ಲಾ ನ್ಯಾಯಾಧೀಶರಾದ ವಿವೇಕ್ ಸಂಗಲ್ ಅವರು ನ್ಯಾಯಾಲ ಯದಲ್ಲಿ ಕಟೇರಿಯಾ ಪರ ವಕೀಲರ ವಾದವನ್ನು ಆಲಿಸಿದರು. ಸೆಪ್ಟೆಂಬರ್ 30 ರಂದು ಪ್ರಾಸಿಕ್ಯೂಷನ್ ವಾದಗಳನ್ನು ಪೂರ್ಣಗೊಳಿಸಲಾಯಿತು. ಉಭಯ ಪಕ್ಷಗಳ ವಾದ-ಪ್ರತಿವಾದಗಳು ಮುಗಿದ ನಂತರ ಅಕ್ಟೋಬರ್ 12 ರಂದು ನಿರ್ಧಾರ ಪ್ರಕಟಿಸುವುದಾಗಿ ಸೂಚಿಸಿ ದ್ದರು.
ಆಗಸ್ಟ್ 5, 2023 ರಂದು ಆಗ್ರಾದ ಸಂಸದ/ಶಾಸಕರ ನ್ಯಾಯಾಲಯವು 12 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿದಂತೆ ಬಿಜೆಪಿ ಸಂಸದ ಕಟೇರಿಯಾ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಐಪಿಸಿಯ ಸೆಕ್ಷನ್ 147 ಮತ್ತು 323 ರ ಅಡಿಯಲ್ಲಿ ಬಿಜೆಪಿ ಸಂಸದರನ್ನು ದೋಷಿ ಎಂದು ನ್ಯಾಯಾ ಲಯ ತೀರ್ಪು ನೀಡಿದೆ. ಬಳಿಕ ಎರಡು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿದೆ. ಈ ಕುರಿತು ಬಿಜೆಪಿ ಸಂಸದ ಡಾ.ರಾಮಶಂಕರ್ ಅವರು 2023ರ ಆಗಸ್ಟ್ 7ರಂದು ಜಿಲ್ಲಾ ನ್ಯಾಯಾಲಯದಲ್ಲಿ ವಿಶೇಷ ಎಂಪಿ/ಎಂಎಲ್‌ಎ ನ್ಯಾಯಾಲಯದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.
ಇನ್ನು ಕಟೇರಿಯಾ ಅವರು ನವೆಂಬರ್ 2014 ರಿಂದ ಜುಲೈ 2016 ರವರೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.