80 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಫಿರೋಜಾಬಾದ್​:ಕೊಲೆ ಪ್ರಕರಣ(1974) ಕ್ಕೆ ಸಂಬಂಧಿಸಿ 80 ವರ್ಷದ ವ್ಯಕ್ತಿ ಇದೀಗ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪ್ರಕರಣ ನಡೆದಿದೆ.
45 ವರ್ಷಗಳ ಹಿಂದೆ ಫಿರೋಜಾಬಾದ್​ ಜಿಲ್ಲೆಯ ನರ್ಕಿ ಗ್ರಾಮದಲ್ಲಿ ಮಹಿಳೆಯೊಬ್ಬರ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಲಯ ಈ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆದೇಶ ನೀಡಿದ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಪರಿಗಣಿಸಿದ್ದು, ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇದರ ಹೊರತಾಗಿ 20 ಸಾವಿರ ದಂಡವನ್ನು ಕೂಡ ವಿಧಿಸಲಾಗಿದೆ. ಒಂದು ವೇಳೆ, ಅಪರಾಧಿ ಈ ದಂಡದ ಹಣವನ್ನು ಪಾವತಿ ಮಾಡು ವಲ್ಲಿ ವಿಫಲರಾದರೆ ಹೆಚ್ಚುವರಿಯಾಗಿ ಮತ್ತೊಂದು ವರ್ಷ ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ತಿಳಿಸಿದೆ.
1984 ಸೆಪ್ಟೆಂಬರ್​​ 14ರಂದು ಮಹೇಂದ್ರ ಸಿಂಗ್​ ಎಂಬ ಆರೋಪಿ ಅದೇ ಗ್ರಾಮದ ಮಹಿಳೆಯ ಮಾತು ಕೇಳಿ, ರಾಮ್​​ ಬೆಟಿಯ ಗಂಡನನ್ನು ರೈಫೆಲ್​ನಿಂದ ಹತ್ಯೆ ಮಾಡಿದ್ದನು. ಈ ಪ್ರಕರಣ ಸಂಬಂದ ರಾಮ್​ ಬೆಟಿ ಮಗಳು ಮೀರಾ ದೇಮಿ ಮಹೇಂದ್ರ ಸಿಂಗ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ ದ್ದರು.
1965ರಲ್ಲಿ ಬೀದರ್‌ನ ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ 2 ಎಮ್ಮೆ 1 ಕರು ಕಳುವಾದ ಕುರಿತು ಮುರಳೀಧರರಾವ್ ಮಾಣಿಕರಾವ್ ಕುಲಕರ್ಣಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿತ್ತು.