ಇಂಫಾಲದಲ್ಲಿ ಆಫ್ರಿಕನ್​ ಹಂದಿ ಜ್ವರ
ಇಂಫಾಲ: ಇದೀಗ ಇಂಫಾಲದಲ್ಲಿ ಆಫ್ರಿಕನ್​ ಹಂದಿ ಜ್ವರ ಕಾಣಿಸಿಕೊಂಡಿದ್ದು, ರಾಜ್ಯದ ಪಶು ಮತ್ತು ಪ್ರಾಣಿ ಸಂಗೋಪನಾ ಇಲಾಖೆ ಕೂಡ ದೃಢ ಪಡಿಸಿದೆ.
ರಾಜ್ಯ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ (ಸಿಎಯು) ಹಂದಿ ಸಾಕಣೆ ಯನ್ನು ಸಾಂಕ್ರಾಮಿಕ ರೋಗದ ಕೇಂದ್ರ ಎಂದು ಘೋಷಿಸಿದೆ.
ಪಶ್ಚಿಮ ಇಂಫಾಲದ ಉಪ ಆಯುಕ್ತರು ಮತ್ತು ನಿರ್ದೇಶಕರು, ಪಶು ಮತ್ತು ಪ್ರಾಣಿ ಸಂಗೋಪನಾ ಇಲಾಖೆ, ನಿರ್ಬಂಧಿತ ಪ್ರದೇಶದಿಂದ ಹಂದಿ ಆಮದು ಮತ್ತು ರಫ್ತು ನಿರ್ಬಂಧಿಸುವಂತೆ ಜಂಟಿಯಾಗಿ ಆದೇಶ ಹೊರಡಿ ಸಿದೆ.
ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಜೀವಂತ ಅಥವಾ ಸತ್ತ ಪ್ರಾಣಿಗಳನ್ನು ಯಾರು ಕೂಡ ತೆಗೆದುಕೊಂಡು ಹೋಗಬಾರದು ಎಂದು ಸೂಚಿಸಲಾಗಿದೆ. ಪಶ್ಚಿಮ ಇಂಫಾಲ ಜಿಲ್ಲೆಯನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಿ ಸಿದ್ದು, ತಕ್ಷಣಕ್ಕೆ ಸೋಂಕಿನ ತಡೆ, ನಿಯಂತ್ರಣ ಮತ್ತು ನಿರ್ಮೂಲಕ್ಕೆ ಕ್ರಮ ನಡೆಸಲಾಗಿದೆ.
ಪ್ರಾಣಿಗಳ ಅಧಿನಿಯಮ, 2009ರ ಅನುಸಾರ ಒಂದು ಕಿ.ಮೀ ಸುತ್ತಲಿನ ಸೋಂಕಿನ ಪ್ರದೇಶದಲ್ಲಿ ನಿಯಂತ್ರಣ ಮತ್ತು ಕಂಟೈನಮೆಂಟ್​​​ ಮಾಡಲಾಗುವುದು. ಈ ವೇಳೆ ಸೋಂಕಿನ ನಿರ್ಮೂಲನೆಗೆ ಅಡ್ಡಿಪಡಿಸುವ ಅಥವಾ ನಿಬಂಧನೆಗಳನ್ನು ಉಲ್ಲಂಘಿಸುವ ವ್ಯಕ್ತಿ ಅಥವಾ ಕಾರ್ಯವು ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ.
ಹಂದಿಗಳ ಸಾವಿನ ಪ್ರಕರಣ ಹೆಚ್ಚಾಗುತ್ತಿದ್ದಂತೆ ಪಶು ಸಂಗೋಪನ ಇಲಾಖೆ, ಸಾವನ್ನಪ್ಪಿದ ಹಂದಿಗಳಿಂದ ಮಾದರಿಗಳನ್ನು ಸಂಗ್ರಹಿಸಿದಾಗ ಇದಕ್ಕೆ ಕಾರಣ ಆಫ್ರಿಕನ್​ ಹಂದಿ ಜ್ವರ ಎಂದು ದೃಢಪಟ್ಟಿದೆ.