  : ದೇಗುಲದ ಒಳಗೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 70 ವರ್ಷದ ಅರ್ಚಕ ಸೆರೆ
ಬೆಂಗಳೂರು:ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಅರ್ಚಕರು ದೇವಸ್ಥಾನದ ಒಳಗೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿಯೊಬ್ಬಳು ಆರೋಪಿಸಿದ್ದು ದೊಡ್ಡ ಗಲಾಟೆಗೆ ಕಾರಣವಾಗಿದೆ. ಬಾಲಕಿಯ ನಡೆದ ಘಟನೆ ವಿವರಿಸಿದ ಬಳಿಕ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ದೇವಾಲಯದ ಹೊರಗೆ ಜಮಾಯಿದ್ದು ಗೊಂದಲಕ್ಕೆಕಾರಣವಾಯಿತು.  70 ವರ್ಷದ ಅರ್ಚಕ ತಿಲಾಗರ್ ಅವರನ್ನು ಬಂಧಿಸಲಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಗಳ ಪ್ರಕಾರ, ಕೆಲವು ಮಕ್ಕಳು ದೇವಾಲಯದ ಹೊರಗೆ ಆಟವಾಡುತ್ತಿದ್ದಾಗ ಆರೋಪಿ ಅರ್ಚಕ ಬಾಲಕಿಯೊಬ್ಬಳನ್ನು  ಸಿಹಿತಿಂಡಿ ನೀಡಿ ಒಳಗೆ ಕರೆದುಕೊಂಡು ಹೋಗಿದ್ದ. ಒಳಗೆ ಹೋದ ಬಳಿಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:  : ಸಾರ್ವಜನಿಕವಾಗಿ ದುರ್ಗಾ ಪೂಜೆ  ಮಾಡಬಾರದು; ಬಾಂಗ್ಲಾದಲ್ಲಿ ಮತಾಂಧ ಮುಸ್ಲಿಮರ ತಾಕೀತು
ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತಿಲಕರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಗುವಿನ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಅರ್ಚಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.