ಬಸ್ ಪಲ್ಟಿ: ಕೋಲಾರದ 13 ಶಬರಿಮಲೆ ಯಾತ್ರಿಕರಿಗೆ ಗಾಯ
ಕೊಟ್ಟಾಯಂ:ಬಸ್ ಪಲ್ಟಿಯಾಗಿ ಕೋಲಾರದವರಾದ 13 ಕ್ಕೂ ಹೆಚ್ಚು ಶಬರಿಮಲೆ ಯಾತ್ರಿಕರು ಗಾಯಗೊಂಡಿ ರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಬೆಳಗ್ಗೆ ನಡೆದಿದೆ.
ಎರುಮೇಲಿ ಸಮೀಪದ ಕನಮಲ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ಕೋಲಾರದಿಂದ ಬಂದ ಯಾತ್ರಾರ್ಥಿಗಳು ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಬೆಟ್ಟದ ದೇಗುಲಕ್ಕೆ ತೆರಳುತ್ತಿದ್ದರು.
ಚಾಲಕನ ನಿಯಂತ್ರಣ ತಪ್ಪಿದ ಬಳಿಕ ವಾಹನ ಪಲ್ಟಿಯಾದಾಗ 40 ಯಾತ್ರಾರ್ಥಿಗಳು ಸೇರಿದಂತೆ 43 ಮಂದಿ ವಾಹನದಲ್ಲಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 13 ಕ್ಕೂ ಹೆಚ್ಚು ಜನರು ಗಾಯಗೊಂಡಿ ದ್ದಾರೆ ಎಂದು ಹೇಳಿದರು.
ಗಾಯಗೊಂಡ ನಾಲ್ವರು ಯಾತ್ರಾರ್ಥಿಗಳನ್ನು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏತನ್ಮಧ್ಯೆ, ಶಬರಿಮಲೆ ಅಯ್ಯಪ್ಪ ದೇಗುಲವನ್ನು ತುಲಾ ಮಾಸಂ ಪೂಜೆಗಾಗಿ ಅಕ್ಟೋಬರ್ 17 ರಂದು ಪೂಜಕ ರಿಗೆ ಮತ್ತೆ ತೆರೆಯಲಾಗಿದೆ ಎಂದು ತಿರುವಾಂಕೂರು ದೇವಸ್ವಂ ವೆಬ್‌ಸೈಟ್ ತಿಳಿಸಿದೆ. ‘ತುಲಾ ಮಾಸಂ’ ಎಂಬುದು ಮಲಯಾಳಂ ಕ್ಯಾಲೆಂಡರ್‌ನ ಪ್ರಕಾರ ‘ತುಲಂ’ ತಿಂಗಳಲ್ಲಿ ಮಾಸಿಕ ಪ್ರಾರ್ಥನೆಯಾಗಿದೆ. ಮಾಸಿಕ ಪ್ರಾರ್ಥನೆಗಳನ್ನು ಪೂರ್ಣಗೊಳಿಸಿದ ನಂತರ ಅ.22 ರಂದು ದೇವಾಲಯವನ್ನು ಮುಚ್ಚಲಾಗುತ್ತದೆ.