ಚುನಾವಣಾ ಪ್ರಚಾರದ ವೇಳೆ ಸಂಸದ ಪ್ರಭಾಕರ್ ರೆಡ್ಡಿಗೆ ಇರಿತ
ಹೈದರಾಬಾದ್:ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಸಂಸದ ಕೋಥಾ ಪ್ರಭಾಕರ್ ರೆಡ್ಡಿ ಅವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ.
ರ್ಯಾಲಿಯಲ್ಲಿ ದಾಳಿಕೋರನನ್ನ ಬಿಆರ್‌ಎಸ್ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ. ದಾಳಿ ನಡೆ ದಾಗ ಸಂಸದರು ಪಾದ್ರಿಯ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಸಂಸದ ರೆಡ್ಡಿ ಅವರನ್ನ ಚಿಕಿತ್ಸೆಗಾಗಿ ಗಜ್ವೆಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.