  : ರಾಹುಲ್‌ ಗಾಂಧಿ ಒಬ್ಬ ಪ್ರಾಮಾಣಿಕ, ಧೈರ್ಯಶಾಲಿ ರಾಜಕಾರಣಿ; ಹಾಡಿ ಹೊಗಳಿದ ನಟ ಸೈಫ್‌
ಮುಂಬೈ: ವಿಪಕ್ಷ ನಾಯಕ ರಾಹುಲ್‌ ಗಾಂಧಿ( ) ಅವರನ್ನು ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌(  ) ಹಾಡಿ ಹೊಗಳಿದ್ದಾರೆ. ರಾಹುಲ್‌ ಗಾಂಧಿಯಂತಹ ಪ್ರಾಮಾಣಿಕ, ಧೈರ್ಯಶಾಲಿ ರಾಜಕಾರಣಿ ಬೇರೊಬ್ಬರಿಲ್ಲ. ತಮ್ಮ ವಿರುದ್ಧ ಟೀಕೆಗಳನ್ನು ಯಾವ ರೀತಿ ನಿಭಾಯಿಸಬೇಕೆಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಪ್ರಾಮಾಣಿಕ ಮತ್ತು ಧೈರ್ಯಶಾಲಿ ರಾಜಕಾರಣಿ ರಾಹುಲ್‌ ಗಾಂಧಿ ಎಂದಿ ಸೈಫ್‌ ಬಣ್ಣಿಸಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ ಗಾಂಧಿ ಮತ್ತು ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಅವರ ಬಗ್ಗೆ ನಿಮಗೆ ಏನು ಅನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರೂ ಅತ್ಯಂತ ಧೈರ್ಯಶಾಲಿ ರಾಜಕಾರಣಿಗಳು. ಅದರಲ್ಲೂ ರಾಹುಲ್‌ ಗಾಂಧಿ ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸು ಶಕ್ತಿ ಇರುವವರು ಎಂದು ಹೇಳಿದ್ದಾರೆ.
ರಾಹುಲ್‌ ಗಾಂಧಿ ಈ ಹಿಂದೆ ತಾವು ಅನುಭವಿಸಿದ ಅವಮಾನ, ಟೀಕೆಗಳನ್ನು ಯಾವ ರೀತಿ ನಿಭಾಯಿಸಿದರು ಎಂಬುದು ಎಲ್ಲರೂ ಪ್ರೇರಣೆ. ಅವರಂತಹ ಧೈರ್ಯಶಾಲಿ ಮತ್ತು ಪ್ರಾಮಾಣಿಕ ರಾಜಕಾರಣಿಗಳೆಂದರೆ ನನಗೆ ಬಹಳ ಇಷ್ಟ. ಅವರು ತಮ್ಮ ವಿರುದ್ಧದ ಎಲ್ಲಾ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಬಹಳ ಕಷ್ಟಪಟ್ಟು ಈ ಹಂತಕ್ಕೆ ಬಂದು ತಲುಪಿದ್ದಾರೆ. ಇದು ನಿಜಕ್ಕೂ ಎಲ್ಲರಿಗೂ ಸ್ಪೂರ್ತಿದಾಯಕ
“      ?”  : “    ,   .          .” 🔥🔥../ZQLHwdzhy8
ಸಾಮಾನ್ಯವಾಗಿ ನಾನು ರಾಜಕೀಯದಿಂದ ಊರ ಉಳಿಯಲು ಬಯಸುತ್ತೇನೆ. ಒಂದು ವಿಷಯದ ಬಗ್ಗೆ ನನಗೆ ಸಂತೋಷವಿದೆ ಅದೇನೆಂದರೆ ಭಾರತದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ನಾನು ರಾಜಕಾರಣಿಯಲ್ಲ. ನಾನು ನಿಜವಾಗಿಯೂ ರಾಜಕಾರಣಿಯಾಗಲು ಬಯಸುವುದಿಲ್ಲ. ನನ್ನ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದರು.
ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿರುವ ಕಾಂಗ್ರೆಸ್ ವಕ್ತಾರ ಶಾಮಾ ಮೊಹಮ್ಮದ್, ಶ್ರೀ ಗಾಂಧಿ ಅವರು ತಮ್ಮ ಬಗ್ಗೆ ಜನರ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ ಎಂಬುದು ನಿಜ ಎಂದು ಹೇಳಿದರು.“ಬಾಲಿವುಡ್ ನಟ ಸೈಫ್ ಅಲಿ ಖಾನ್ ಲೋಪಿ ರಾಹುಲ್ ಗಾಂಧಿ ಜಿ ಅವರನ್ನು ಹೊಗಳಿದ್ದಾರೆ. ಅವರು ಹೇಳುವುದು ಸಂಪೂರ್ಣವಾಗಿ ನಿಜ-ರಾಹುಲ್ ಗಾಂಧಿ ಜಿ ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ಅವರ ಬಗ್ಗೆ ಜನರ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ” ಎಂದು ಅವರು ಹೇಳಿದರು. ಸೈಫ್‌ ಅಲಿಖಾನ್‌ ಅವರ ಈ ವಿಡಿಯೋ ಇದೀಗ ಎಲ್ಲೆಡೆ ಭಾರೀ ವೈರಲ್‌ ಆಗುತ್ತಿದೆ.
ಈ ಸುದ್ದಿಯನ್ನೂ ಓದಿ: : ದ್ವೇಷ, ಹಿಂಸಾಚಾರ ಸೃಷ್ಟಿಸುವುದೇ ಬಿಜೆಪಿ, RSSನ ಗುರಿ- ರಾಹುಲ್‌ ಕಿಡಿ