ಸಹಾರಾ ಸಮೂಹದ ಸ್ಥಾಪಕ ಸುಬ್ರತಾ ರಾಯ್ ಇನ್ನಿಲ್ಲ
ನವದೆಹಲಿ:ಸಹಾರಾ ಸಮೂಹದ ಸ್ಥಾಪಕ ಸುಬ್ರತಾ ರಾಯ್ (75) ದೀರ್ಘಕಾಲದ ಅನಾರೋಗ್ಯದ ನಂತರ ಮುಂಬೈನಲ್ಲಿ ನಿಧನರಾದರು.
ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು.
ಸುಬ್ರತಾ ರಾಯ್ ಗೋರಖ್ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. ನಂತರ ಅವರು 1976ರಲ್ಲಿ ಸಹಾರಾ ಫೈನಾನ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಗೋರಖ್ಪುರದಲ್ಲಿ ವ್ಯವಹಾರಕ್ಕೆ ಕಾಲಿಟ್ಟರು.
1978 ರ ಹೊತ್ತಿಗೆ, ಅವರು ಅದನ್ನು ಸಹಾರಾ ಇಂಡಿಯಾ ಪರಿವಾರ್ ಆಗಿ ಪರಿವರ್ತಿಸಿದರು. ಇದು ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಸಹಾರಾ ಸಮೂಹವು 1992ರಲ್ಲಿ ರಾಷ್ಟ್ರೀಯ ಸಹಾರಾ ಎಂಬ ಹಿಂದಿ ಭಾಷೆಯ ಪತ್ರಿಕೆಯನ್ನು ಪ್ರಾರಂಭಿಸಿತು ಮತ್ತು ನಂತರ ಸಹಾರಾ ಟಿವಿಯೊಂದಿಗೆ ದೂರದರ್ಶನ ಕ್ಷೇತ್ರವನ್ನು ಪ್ರವೇಶಿಸಿತು.