ದತ್ತು ಪಡೆದ ಬಾಲಕಿಯ ಮೇಲೆ ಬಲಾತ್ಕಾರ: 109 ವರ್ಷಗಳ ಜೈಲು ಶಿಕ್ಷೆ
ಪಥನಂತಿಟ್ಟಾ:ಕೇರಳದ ನ್ಯಾಯಾಲಯವು ಇತ್ತೀಚೆಗೆ ಥಾಮಸ್ ಸ್ಯಾಮ್ಯುಯೆಲ್ ಹೆಸರಿನ 63 ವರ್ಷದ ವ್ಯಕ್ತಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ದೋಷಿ ಎಂದು, 109 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿ ಥಾಮಸ್ ಸ್ಯಾಮ್ಯುಯೆಲ್ ಬಲಾತ್ಕಾರ ಮಾಡಿದ ಬಾಲಕಿಯನ್ನು ಕೆಲವು ವರ್ಷಗಳ ಹಿಂದೆ ದತ್ತು ಪಡೆದಿದ್ದನು.
ಕೇರಳದ ದಕ್ಷಿಣದಲ್ಲಿರುವ ಪಥನಂತಿಟ್ಟಾ ಜಿಲ್ಲೆಯ ಅದೂರ್‌ನಲ್ಲಿರುವ ಶೀಘ್ರಗತಿಯ ವಿಶೇಷ ನ್ಯಾಯಾಲಯವು ಪಂದಳಂ ನಿವಾಸಿ ಥಾಮಸ್ ಸ್ಯಾಮ್ಯು ಯೆಲ್‌ಗೆ 6 ಲಕ್ಷ 25 ಸಾವಿರ ರೂ. ದಂಡವನ್ನೂ ವಿಧಿಸಿದೆ. ದಂಡದ ಮೊತ್ತವನ್ನು 12 ವರ್ಷದ ಸಂತ್ರಸ್ತ ಬಾಲಕಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಸಂತ್ರಸ್ತ ಬಾಲಕಿಯನ್ನು ಸ್ಯಾಮ್ಯುಯೆಲ್ ಮತ್ತು ಆತನ ಪತ್ನಿ ದತ್ತು ಪಡೆದಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಹುಡುಗಿಯನ್ನು ದತ್ತು ಪಡೆದ ನಂತರ, ಅವಳು ಸ್ಯಾಮ್ಯುಯೆಲ್ ಮನೆಗೆ ಬಂದ ಕ್ಷಣದಿಂದ, ಅವನು ಅವಳ ಮೇಲೆ ಲೈಂಗಿಕ ದೌರ್ಜನ್ಯ ನೀಡಲು ಪ್ರಾರಂಭಿಸಿದನು.
ಸ್ಯಾಮ್ಯುಯೆಲ್ ಅನಾರೋಗ್ಯದ ಕಾರಣ ನೀಡುತ್ತಾ, ಮಕ್ಕಳ ಕಲ್ಯಾಣ ಸಮಿತಿಗೆ ಬಾಲಕಿಯನ್ನು ಕರೆದುಕೊಂಡು ಹೋಗುವಂತೆ ಮನವಿ ಮಾಡಿದನು. ನಂತರ ಬಾಲಕಿಯನ್ನು ಮತ್ತೊಂದು ಕುಟುಂಬ ದತ್ತು ಪಡೆಯಿತು. ಸಂತ್ರಸ್ತೆ ಬಾಲಕಿಯು ಲೈಂಗಿಕ ಕಿರುಕುಳದ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದಾಳೆ.
ಪಂದಳಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ, ‘ಪೋಕ್ಸೊ’ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.