ಆಸ್ಪತ್ರೆ ಕ್ಯಾಂಟೀನ್ ಆಹಾರ ತಿಂದ ಇಲಿ ವಿಡಿಯೋ ವೈರಲ್‌: ಕ್ಯಾಂಟೀನ್ ಬಂದ್
ಚೆನ್ನೈ :ಸರ್ಕಾರಿ ಆಸ್ಪತ್ರೆಯಲ್ಲಿನ ಕ್ಯಾಂಟೀನ್ ನಲ್ಲಿ ಇರಿಸಲಾಗಿದ್ದ ಆಹಾರವನ್ನು ಇಲಿ ತಿನ್ನುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೀಡಿಯೋ ವೈರಲ್ ಬೆನ್ನಲ್ಲೇ, ಚೆನ್ನೈನ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಯ ಕ್ಯಾಂಟೀನ್ ಬಂದ್ ಮಾಡಲಾಗಿದೆ.
ರೋಗಿಯ ಸಂಬಂಧಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ರೋಗಿಯ ಸಂಬಂಧಿಯೊಬ್ಬರು ಘಟನೆಯನ್ನು ಚಿತ್ರೀಕರಿಸಿ ಕ್ಯಾಂಟೀನ್ನ ನೈರ್ಮಲ್ಯದ ಬಗ್ಗೆ ದೂರು ನೀಡಿದ್ದರು.
ವೀಡಿಯೋ ವೈರಲ್ ಆಗಿ, ಜನರು ತೀವ್ರ ಆಕ್ರೋಶ ಹೊರ ಹಾಕಿದ ಬೆನ್ನಲ್ಲೇ, ಕ್ಯಾಂಟೀನ್ ಗೆ ಆಹಾರ ಸುರಕ್ಷತಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರಿ ಆಸ್ಪತ್ರೆಯ ಕ್ಯಾಂಟೀನ್ ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದ ಕಾರಣ, ಆಹಾರ ಸುರಕ್ಷತಾ ಅಧಿಕಾರಿಗಳು ಕ್ಯಾಂಟೀನ್ ಮುಚ್ಚಿದ್ದಾರೆ.