ಸರಣಿ ಬಾಂಬ್ ಸ್ಫೋಟ ಪ್ರಕರಣ: ಮೃತರ ಸಂಖ್ಯೆ ಆರಕ್ಕೆ ಏರಿಕೆ
24 ವರ್ಷದ ಪ್ರವೀಣ್ ಪ್ರದೀಪನ್ ಅವರು ಶೇ 50 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದರು. ವೆಂಟಿಲೇಟರ್ ಬೆಂಬಲದಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಇವರು ಸ್ಫೋಟದಲ್ಲಿ ಮೃತಪಟ್ಟ 12 ವರ್ಷದ ಲಿಬ್ನಾ ಅವರ ಹಿರಿಯ ಸಹೋದರ.
ಅವರ ತಾಯಿ ಸಾಲಿ ಪ್ರದೀಪನ್ ಕೂಡ ಶನಿವಾರ ಮೃತಪಟ್ಟರು. ಸ್ಫೋಟದಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರ ಸಹೋದರ ರಾಹುಲ್ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಟ್ಟು 11 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.