ನಂ.1 ಸ್ಥಾನ ಮರಳಿ ಪಡೆದ ಎಚ್‌ಎಂಡಿ ಗ್ಲೋಬಲ್
ಹಣಕಾಸು ವರ್ಷ 2023ರ 3ನೇ ತ್ರೈಮಾಸಿಕದ ಐಡಿಸಿ ವರದಿಯ ಪ್ರಕಾರ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯಸಾಧಿಸಿದೆ
ನವದೆಹಲಿ:ನೋಕಿಯಾ ಫೋನ್‌ಗಳನ್ನು ತಯಾರಿಸುವ ಎಚ್‌ಎಂಡಿ ಗ್ಲೋಬಲ್, ಫೀಚರ್ ಫೋನ್ ಮಾರುಕಟ್ಟೆಯಲ್ಲಿ ನಿರ್ವಿವಾದ ನಾಯಕನಾಗಿ ಹೊರಹೊಮ್ಮಿದೆ.  ಹಣಕಾಸು ವರ್ಷ 2023ರ 3ನೇ ತ್ರೈಮಾಸಿಕದ ‘ಐಡಿಸಿ’ಯ ಇತ್ತೀಚಿನ ವರದಿಯ ಪ್ರಕಾರ, ಮೌಲ್ಯದ ಮೂಲಕ ಮಾರುಕಟ್ಟೆ ಪಾಲಿ ನಲ್ಲಿ ಅಗ್ರ ಸ್ಥಾನ ಮತ್ತು ಪರಿಮಾಣದ ಮೂಲಕ ಎರಡನೇ ಸ್ಥಾನ  ಪಡೆದುಕೊಂಡಿದೆ.
ಐಡಿಸಿ ವರದಿಯ ಪ್ರಕಾರ, ಎಚ್‌ಎಂಡಿ ಗ್ಲೋಬಲ್, ಮೌಲ್ಯದ ಆಧಾರದಲ್ಲಿ ಗಮನಾರ್ಹವಾದ ಶೇ 30.7ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಹಣಕಾಸು ವರ್ಷ 2023ರ ದ್ವಿತೀಯ ತ್ರೈಮಾಸಿಕದ ಮಾರುಕಟ್ಟೆ ಪಾಲಿಗೆ ಹೋಲಿಸಿದರೆ ಶೇ 4.2ರಷ್ಟು ಗಮನಾರ್ಹ ಹೆಚ್ಚಳ ದಾಖಲಿಸಿದೆ. ಪರಿಮಾಣದ ವಿಷಯದಲ್ಲಿ ಬ್ರ್ಯಾಂಡ್ ಶ್ಲಾಘನೀಯ ಎನ್ನಬಹುದಾದ ಶೇ  22.4ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇ 2.3ರಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿದೆ.
ಹಲವಾರು ಕಾರ್ಯತಂತ್ರದ ಉಪಕ್ರಮಗಳು ಮತ್ತು ಅನುಷ್ಠಾನಗಳು ಫೀಚರ್‌ ಫೋನ್ ಮಾರುಕಟ್ಟೆಯಲ್ಲಿ ‘ಎಚ್‌ಎಂಡಿ’ಯ ಗಮನಾರ್ಹ ಕಾರ್ಯ ಕ್ಷಮತೆಗೆ ಕೊಡುಗೆ ನೀಡಿವೆ.
ಕೊಡುಗೆ ನೀಡಿದ ಕೆಲ ಪ್ರಮುಖ ಸಂಗತಿಗಳು ಹೀಗಿವೆ:
ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ಉತ್ತಮ-ಗುಣಮಟ್ಟದ, ವಿಶ್ವಾಸಾರ್ಹ ಮತ್ತು ನವೀನ ಮೊಬೈಲ್ ಪರಿಹಾರಗಳನ್ನು ನೀಡಲು ‘ಎಚ್‌ಎಂಡಿ’ಯು ಸಮರ್ಪಣೆಗೊಂಡಿದೆ. ಈ ಯಶಸ್ಸನ್ನು ಆಧರಿಸಿ ಮುಂದುವರೆಯಲು  ಮತ್ತು ಫೀಚರ್‌ ಫೋನ್ ಮಾರುಕಟ್ಟೆಯನ್ನು ಮುನ್ನಡೆಸಲು ಬ್ರ್ಯಾಂಡ್ ಎದುರು ನೋಡುತ್ತಿದೆ.