 : ಟೀನೇಜ್‌ ಬಾಯ್‌ಫ್ರೆಂಡ್‌ಗಾಗಿ ಸಸ್ಯಾಹಾರಿಯಾಗಿದ್ದ ಬಿಪಾಶಾ; ಹಳೆ ಕತೆ ಸ್ಮರಿಸಿಕೊಂಡ ಬೋಲ್ಡ್ ನಟಿ
ನವದೆಹಲಿ:ಬಾಲಿವುಡ್ ನಟಿ ( ) ಬಿಪಾಶಾ ಬಸು ( ) ಅವರು ತಮ್ಮಹರೆಯದ ದಿನಗಳಲ್ಲಿ ಬಾಯ್‌ಫ್ರೆಂಡ್‌ಗಾಗಿ ಸಸ್ಯಾಹಾರಿಯಾಗಲು () ಬಯಸಿದ್ದರು. ಅಲ್ಲದೆ, ಸಲ್ವಾರ್ ಕಮೀಜ್ ಮಾತ್ರ ಧರಿಸಲು ನಿರ್ಧರಿಸಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ. ಹಾಗೆಯೇ ತಾವು 15ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದೆ ಎಂದು ಹೇಳಿಕೊಂಡಿದ್ದಾರೆ. ಆತನೊಂದಿಗೆ ಡೇಟಿಂಗ್ ಕೂಡ ಮಾಡುತ್ತಿದ್ದೆ. ಪ್ಯೂರ್ ವೆಜ್ ಆಗಿದ್ದ ಆತನಿಗಾಗಿ ಸಂಪೂರ್ಣ ಸಸ್ಯಾಹಾರಿಯಾಗಿದ್ದೆ ಎಂದು ಬಿಪಾಶ ಹೇಳಿಕೊಂಡಿದ್ದಾರೆ.
ಈ ವಿಷಯ ನನ್ನೊಂದಿಗೆ ಡೇಟ್ ಮಾಡಿದವರಿಗೂ ಗೊತ್ತಿದೆ. ನನ್ನ ತಾಯಿಗೂ ಗೊತ್ತಿದೆ. ನಾನು ಮಾಂಸಾಹಾರ ಪ್ರಿಯಳಾಗಿದ್ದೆ. ಆದರೆ ಪ್ರೀತಿಗಾಗಿ ಸಸ್ಯಾಹಾರಿಯಾಗಲು ಬಯಸಿದ್ದೆ. ಮಾತ್ರವಲ್ಲದೆ ನಾನು ಸಲ್ವಾರ್ ಕಮೀಜ್ ಮಾತ್ರ ಧರಿಸಬೇಕು ಎಂದು ನಿರ್ಧರಿಸಿದ್ದೆ ಎಂದಿದ್ದಾರೆ. ನಾನು ಮಾಂಸಾಹಾರ ಬಿಟ್ಟಿದ್ದನ್ನು ತಿಳಿದು ತಾಯಿ ಬಹುತೇಕ ಮೂರ್ಛೆ ಹೋಗಿದ್ದರು. ಯಾಕೆಂದರೆ ನಾನು ಯಾವಾಗಲೂ ಮಾಂಸಹಾರವನ್ನು ಇಷ್ಟಪಡುತ್ತಿದ್ದೆ.ಅಲ್ಲದೆ ಶಾರ್ಟ್ಸ್ ನನ್ನ ಪ್ರೀತಿಯ ಡ್ರೆಸ್‌ ಆಗಿತ್ತು. ನನ್ನ ನಿರ್ಧಾರ ಕೇಳಿ ಅವರಿಗೆ ಆಘಾತವಾಗಿತ್ತುಎಂದು ಹೇಳಿಕೊಂಡಿದ್ದಾರೆ.
ಆಗ ನನಗೆ ಕೇವಲ 15 ವರ್ಷ. ಆಗ ಒಪ್ಪಿಕೊಂಡಿದ್ದೆ. ಆದರೆ ಈಗ ನಾನು ಏನು ಧರಿಸಬೇಕೆಂದು ಯಾವುದೇ ವ್ಯಕ್ತಿ ಹೇಳಲು ಸಾಧ್ಯವಿಲ್ಲ ಎಂದು ಬಿಪಾಶಾ ಬಸು ಹೇಳಿಕೊಂಡಿದ್ದಾರೆ. ಧೂಮ್ 2, ಜಿಸ್ಮ್, ಫಿರ್ ಹೆರಾ ಫೆರಿ, ದಮ್ ಮಾರೋ ದಮ್, ರೇಸ್, ಓಂಕಾರ, ಬಚ್ನಾ ಏ ಹಸೀನೋ ಮತ್ತು ರಾಝ್ ಮೊದಲಾದ ಚಿತ್ರಗಳಲ್ಲಿನ ನಟಿಸಿರುವ ಬಿಪಾಶಾ ಚಿತ್ರರಂಗ ಪ್ರವೇಶಿಸುವ ಮೊದಲು ಸೂಪರ್ ಮಾಡೆಲ್ ಆಗಿದ್ದರು. ಡರ್ ಸಬ್ಕೋ ಲಗ್ತಾ ಹೈ ಎಂಬ ಟಿವಿ ಕಾರ್ಯಕ್ರಮದ ನಿರೂಪಕಿಯೂ ಆಗಿದ್ದರು.
2001 ರಲ್ಲಿ ಅಜನಬಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 2018 ರ ವೆಲ್ಕಮ್ ಟು ನ್ಯೂಯಾರ್ಕ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
  : ರಾಹುಲ್‌ ಗಾಂಧಿ ಒಬ್ಬ ಪ್ರಾಮಾಣಿಕ, ಧೈರ್ಯಶಾಲಿ ರಾಜಕಾರಣಿ; ಹಾಡಿ ಹೊಗಳಿದ ನಟ ಸೈಫ್‌
2015 ರ ಅಲೋನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಭೇಟಿಯಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ 2016ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದಾರೆ. ಡೇಂಜರಸ್ ವೆಬ್ ಸರಣಿಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವ ಇವರು 2022ರ ನವೆಂಬರ್‌ನಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮಗುವಿಗೆ ದೇವಿ ಎಂಬ ಹೆಸರನ್ನೂ ಇಟ್ಟಿದ್ದಾರೆ.