ಮಲಯಾಳಂ ಲೇಖಕಿ ಪಿ ವಲ್ಸಲಾ ಇನ್ನಿಲ್ಲ
ಕೋಝಿಕ್ಕೋಡ್:ಮಲಯಾಳಂ ಲೇಖಕಿ ಪಿ ವಲ್ಸಲಾ ( 85) ಅವರು ಹೃದಯಾಘಾತದಿಂದ ಕೋಝಿಕೋಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಲ್ಸಲಾ ಅವರನ್ನು ಮುಕ್ಕಂನಲ್ಲಿರುವ ಕುನ್ಹಿತರುವೈ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ಕೆಎಂಸಿಟಿ) ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.
ಮುಕ್ಕಂ ಬಳಿಯ ಅಗಸ್ತಿಯಾಮುಝಿಯಲ್ಲಿರುವ ಮಗಳು ಡಾ.ಎಂ.ಎ.ಮಿನಿ ಅವರ ಮನೆಯಲ್ಲಿ ಪತಿ ಮರೋಳಿ ಅಪ್ಪುಕ್ಕುಟ್ಟಿ ಅವರೊಂದಿಗೆ ವಾಸ ವಾಗಿದ್ದರು. ಅವರ ಮಗ ಅರುಣ್ ಮರೋಳಿ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ಆಗಸ್ಟ್ 1938 ರಲ್ಲಿ ಜನಿಸಿದವಲ್ಸಲಾ, 1972 ರಲ್ಲಿ ಪ್ರಕಟವಾದ ‘ನೆಲ್ಲು’ ಗೆ ಹೆಸರುವಾಸಿಯಾಗಿದ್ದರು, ಇದು ವಯನಾಡಿನ ಬುಡಕಟ್ಟು ಸಮುದಾಯಗಳ ಜೀವನವನ್ನು ನಿರೂಪಿಸುತ್ತದೆ.
ವಲ್ಸಲಾ ಅವರು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಳುತಚ್ಚನ್ ಪುರಸ್ಕಾರ, ಮುತ್ತತು ವರ್ಕಿ ಪ್ರಶಸ್ತಿ ಮತ್ತು ಸಿ.ವಿ.ಕುಂಞಿರಾಮನ್ ಸ್ಮಾರಕ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಸಾಹಿತ್ಯಿಕ ಗೌರವಗಳಿಗೆ ಭಾಜನರಾಗಿದ್ದರು. ವಲ್ಸಲಾ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.