ಮಿಚಾಂಗ್ ಚಂಡಮಾರುತ: ಇಂದು ಶಾಲೆ, ಕಾಲೇಜುಗಳಿಗೆ ರಜೆ
ತಮಿಳುನಾಡಿನ ಹಲವು ಭಾಗಗಳಲ್ಲಿ ಡಿಸೆಂಬರ್ 5ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ರಾಜಧಾನಿ ಚೆನ್ನೈ, ತಿರುವಲ್ಲೂರು, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಜಿಲ್ಲಾಡಳಿತಗಳು ಸೋಮವಾರ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿವೆ. ತಿರುವಲ್ಲೂರು ಮತ್ತು ಚೆನ್ನೈ ಜನರು ಡಿ.4 ಮತ್ತು 5ರಂದು ಮನೆಯ ಒಳಗೇ ಇರುವಂತೆ ಐಎಂಡಿ ತಿಳಿಸಿದೆ.
ಡಿ.3ರಿಂದ 7ರವರೆಗೆ ಸುಮಾರು 144 ರೈಲುಗಳ ಸೇವೆಯನ್ನು ರದ್ದಾಗಿವೆ. ಚೆನ್ನೈ ವಿಮಾನ ನಿಲ್ದಾಣದ ರನ್ ವೇ ಮೇಲೆ ಮಳೆನೀರು ನಿಂತ ಪರಿಣಾಮ ವಿಮಾನ ಸಂಚಾರ ಸ್ಥಗಿತವಾಗಿದೆ.