   :  ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಭಗತ್ ಸಿಂಗ್ ಕುರಿತ ಕುತೂಹಲಕರ ಸಂಗತಿಗಳಿವು
ವಸಾಹತುಶಾಹಿ (   ) ವಿರೋಧಿ, ಕ್ರಾಂತಿಕಾರಿಯಾಗಿದ್ದ ಭಗತ್ ಸಿಂಗ್ ( ) ಅತ್ಯಂತ ಸಣ್ಣ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಚಿಕ್ಕ ವಯಸ್ಸಿನಲ್ಲೇ ಗಲ್ಲಿಗೇರಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದ (   ) ಅವರ ಜನ್ಮ ದಿನವನ್ನು ಹುತಾತ್ಮರ ದಿನ (  2024) ಅಥವಾ ಶಹೀದ್ ದಿವಸ್ ಎಂದು ಕರೆಯಲಾಗುತ್ತದೆ.
ಭಗತ್ ಸಿಂಗ್ ಅವರನ್ನು ಶಹೀದ್-ಎ-ಅಜಮ್ ಭಗತ್ ಸಿಂಗ್ ಎಂದು ಕರೆಯಲಾಗುತ್ತದೆ. ಇವರ ಕ್ರಾಂತಿಕಾರಿ ಜೀವನ ಯುವ ಜನರಲ್ಲಿ ದೇಶ ಪ್ರೇಮವನ್ನು ಮೂಡುವಂತೆ ಮಾಡುತ್ತದೆ ಮಾತ್ರವಲ್ಲದೆ ದೇಶಕ್ಕಾಗಿ ಹೋರಾಡಲು ಇತರರನ್ನು ಪ್ರೇರೇಪಿಸುತ್ತದೆ.
ಈಗಿನ ಪಾಕಿಸ್ತಾನದ ಭಾಗವಾಗಿರುವ ಭಾರತದ ಪಂಜಾಬ್ ನಲ್ಲಿ ಸಿಕ್ಖ್ ಕುಟುಂಬದಲ್ಲಿ ಭಗತ್ ಸಿಂಗ್ 1907ರ ಸೆಪ್ಟೆಂಬರ್ 28ರಂದು ಜನಿಸಿದರು. ಅವರ ಜನ್ಮ ದಿನವನ್ನು ಹುತಾತ್ಮರ ದಿನಾವಾಗಿ ಆಚರಿಸಲಾಗುತ್ತದೆ.
ಭಾರತದಲ್ಲಿ ಹಲವಾರು ಸಂದರ್ಭಗಳಲ್ಲಿ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ಅವುಗಳಲ್ಲಿ ಮಾರ್ಚ್ 23 ಕೂಡ ಒಂದು. ಈ ದಿನವು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ ರಾಜಗುರು ಅವರ ಪುಣ್ಯತಿಥಿಯನ್ನು ಸೂಚಿಸುತ್ತದೆ.
ಭಾರತೀಯ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಶಕ್ತಿಶಾಲಿ ಕ್ರಾಂತಿಕಾರಿ ಎಂದೇ ಕರೆಯಲ್ಪಡುವ ಭಗತ್ ಸಿಂಗ್ ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕರು ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.
ವೀರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರ ದೇಶಪ್ರೇಮದ ಭಾವನೆಗಳು ಬ್ರಿಟಿಷ್ ಆಡಳಿತದ ವಿರುದ್ಧ ಮಾತ್ರವಲ್ಲ ಕೋಮುವಾದದ ಆಧಾರದ ಮೇಲೆ ಭಾರತವನ್ನು ವಿಭಜಿಸುವುದನ್ನು ವಿರೋಧಿಸಿದ್ದರು.
ಮಾರ್ಕ್ಸ್ ವಾದಿ ಸಿದ್ಧಾಂತಗಳಿಂದ ಆಕರ್ಷಿತರಾಗಿದ್ದ ಅವರಲ್ಲಿ ಕ್ರಾಂತಿಕಾರಿ ವಿಚಾರಗಳೇ ತುಂಬಿದ್ದವು. ಅತ್ಯತ್ತಮ ವಿದ್ಯಾರ್ಥಿಯಾಗಿಯೂ ಹೆಸರುಗಳಿಸಿದ್ದ ಅವರು ಉತ್ತಮ ಓದುಗರಾಗಿದ್ದರು ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಯಾವಾಗಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ತಮ್ಮ ಸಂಪೂರ್ಣ ಜೀವನವನ್ನು ಭಾರತೀಯ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಡಲು ಹದಿಮೂರನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದ ಅವರು 23 ನೇ ವಯಸ್ಸಿನಲ್ಲಿ ಬ್ರಿಟಿಷರಿಂದ ಮರಣ ದಂಡನೆಗೆ ಗುರಿಯಾದರು. ಬ್ರಿಟಿಷ್ ಪೋಲೀಸ್ ಅಧಿಕಾರಿಯನ್ನು ಕೊಂದ ಆರೋಪದಲ್ಲಿ ಅವರನ್ನು 1931ರ ಮಾರ್ಚ್ 23ರಂದು ಗಲ್ಲಿಗೇರಿಸಲಾಯಿತು.
   : ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಪಂಡಿತ್ ದೀನದಯಾಳ್ ಉಪಾಧ್ಯಾಯರ ಬದುಕು ಕುತೂಹಲಕರ