2 ಕೋಟಿ ದಾಟಿದ ಪ್ರಧಾನಿ ಯೂಟ್ಯೂಬ್ ಚಂದಾದಾರರ ಸಂಖ್ಯೆ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವೈಯಕ್ತಿಕ ಯೂಟ್ಯೂಬ್ ಚಾನೆಲ್‌ನ ಚಂದಾದಾರರ ಸಂಖ್ಯೆ 2 ಕೋಟಿ ದಾಟಿದೆ.
ಇತರೆ ನಾಯಕರ ಯೂಟ್ಯೂಬ್‌ ಚಾನೆಲ್‌ಗಳ ಚಂದಾದಾರಿಕೆ ಸಂಖ್ಯೆ ಮೋದಿ ಅವರ ಚಾನೆಲ್‌ನ ಚಂದಾದಾರಿಕೆ ಸಂಖ್ಯೆಗಿಂತ ಬಹಳ ಕಡಿಮೆ ಇವೆ.
ಮೋದಿ ಅವರ ಚಾನೆಲ್‌ಗೆ ಅಪ್ಲೋಡ್ ಮಾಡಲಾಗಿರುವ ವಿಡಿಯೊಗಳು ಈವರೆಗೆ 450 ಕೋಟಿಗೂ ಅಧಿಕ ವೀವ್ಸ್ ಪಡೆದಿವೆ.
ಬ್ರಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರ ಯೂಟ್ಯೂಬ್ ಚಾನೆಲ್‌ 64 ಲಕ್ಷ ಚಂದಾದಾರರನ್ನು ಹೊಂದಿದ್ದು, ಮೋದಿ ಅವರ ಚಾನೆಲ್‌ನ ಚಂದಾದಾರರ ಸಂಖ್ಯೆಯ ಮೂರನೇ ಒಂದಕ್ಕಿಂತ ಕಡಿಮೆ ಆಗಿದೆ. ವೀವ್ಸ್‌ನಲ್ಲಿ ಎರಡನೇ ಸ್ಥಾನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಚಾನೆಲ್‌ನ ವೀವ್ಸ್ 22.4 ಕೋಟಿ ಆಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಯೂಟ್ಯೂಬ್ ಚಾನೆಲ್ 7.89 ಲಕ್ಷ ಮತ್ತು ಟರ್ಕಿ ಪ್ರಧಾನಿ ತಯ್ಯಿಪ್ ಎರ್ದೊಗಾನ್ ಚಾನೆಲ್ 3.16 ಲಕ್ಷ ಚಂದಾದಾರರನ್ನು ಹೊಂದಿವೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಯೂಟ್ಯೂಬ್ ಚಾನೆಲ್ ಚಂದಾದಾರರ ಸಂಖ್ಯೆ 35 ಲಕ್ಷ ಇದೆ.
2007ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿಯವರು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು.