5 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಏಕಕಾಲಕ್ಕೆ ಟಿನುಗೆ ಯಶಸ್ಸು
ನವದೆಹಲಿ:ಬಿಹಾರದ ಮಹಿಳೆಯ ಮಗಳು ತನ್ನ ತಾಯಿಯ ಕನಸನ್ನು ನನಸು ಮಾಡಿದ್ದಾಳೆ. ಬಿಹಾರದ ಜಮುಯಿ ಜಿಲ್ಲೆಯ ನಿವಾಸಿ ಪಿಂಕಿ ಸಿಂಗ್ ಇಂಗ್ಲಿಷ್‌ನಲ್ಲಿ ಎಂಎ ಪದವಿ ಪಡೆದಿದ್ದಾರೆ.
ಓದಿದ ನಂತರ ಅಧಿಕಾರಿಯಾಗಬೇಕೆಂದು ಬಯಸಿದ್ದಳು. ಆದರೆ ಕನಸು ನನಸಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಗೃಹಿಣಿಯಾಗಿ ತನ್ನ ಮಕ್ಕಳನ್ನು ಬೆಳೆಸಿದರು. ಆದರೆ ಪಿಂಕಿ ಮಗಳು ಟಿನು ಸಿಂಗ್ ಈಗ ಬೆಳೆದು ದೊಡ್ಡವಳಾಗಿದ್ದು, ತಾಯಿ ಮಾಡಲಾಗದ ಸಾಧನೆ ಮಾಡಿದ್ದಾಳೆ.
ಟಿನು ಕುಮಾರಿ ಒಂದರ ನಂತರ ಒಂದರಂತೆ 5 ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ. ಟಿನುವಿನ ಈ ಯಶಸ್ಸಿನಿಂದ ಅವರ ಕುಟುಂಬ ಹೆಮ್ಮೆ ಪಡುತ್ತಿದೆ. ಅಕ್ಕಪಕ್ಕದವರೂ ತುಂಬಾ ಖುಷಿಯಾಗಿದ್ದಾರೆ.
ತಾಯಿಯ ಕನಸನ್ನು ನನಸಾಗಿಸಲು ಟಿನು ಕುಮಾರಿ ಒಂದಲ್ಲ ಎರಡಲ್ಲ 5 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಏಕಕಾಲಕ್ಕೆ ಯಶಸ್ಸು ಸಾಧಿಸಿದ್ದಾಳೆ. ಟಿನು ಸಿಂಗ್ ಅವರ ತಂದೆ ಮುನ್ನಾ ಕುಮಾರ್ ಸಿಂಗ್ ಸಿಆರ್‌ಪಿಎಫ್‌ನಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿದ್ದರೆ, ತಾಯಿ ಪಿಂಕಿ ಸಿಂಗ್ ಗೃಹಿಣಿ. ಟಿನುವಿನ ಯಶಸ್ಸಿನಿಂದ ಇಬ್ಬರೂ ತುಂಬಾ ಖುಷಿಯಾಗಿದ್ದಾರೆ.
ಟಿನು ಡಿಸೆಂಬರ್ ಕೊನೆಯ ವಾರದಲ್ಲಿ ಏಕಕಾಲದಲ್ಲಿ 5 ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿದ್ದಾಳೆ. ಡಿಸೆಂಬರ್ 22ರಂದು ಆಕೆ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಆಯ್ಕೆಯಾದರು. ಮರುದಿನ ಡಿಸೆಂಬರ್ 23ರಂದು ಟಿನು ಬಿಹಾರದ   ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದರು ಮತ್ತು ಸಹಾಯಕ ಶಾಖೆಯ ಅಧಿಕಾರಿ ಹುದ್ದೆಗೆ ಆಯ್ಕೆಯಾದರು.
ನಂತರ BPSCಯ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದರು. ಇದಲ್ಲದೆ ಮಾಧ್ಯಮಿಕ ಶಾಲೆಯ 9ರಿಂದ 10ನೇ ತರಗತಿ ಕೇಡರ್ ಮತ್ತು ಹೈಯರ್ ಸೆಕೆಂಡರಿ 11 ರಿಂದ 12ನೇ ತರಗತಿ ಕೇಡರ್‌ಗೆ ಬಿಪಿಎಸ್‌ಸಿ ಶಿಕ್ಷಕರ ನೇಮಕಾತಿಯಲ್ಲಿ ಯಶಸ್ಸನ್ನು ಪಡೆದರು.