 : ನೈಟ್‌ ಬಸ್ಸುಗಳಲ್ಲಿ ಮುಲುಗಾಟ, ನರಳಾಟ! ಬೆನ್ನು ಬಿದ್ದ ಪೊಲೀಸರಿಗೆ ಶಾಕ್!‌
ಚೆನ್ನೈ: ವಿಚಿತ್ರ ಪ್ರಕರಣವೊಂದು ಇತ್ತೀಚೆಗೆ ಪೊಲೀಸರ ಗಮನಕ್ಕೆ ಬಂತು. ಚೆನ್ನೈ () ಹಾಗೂ ಬೆಂಗಳೂರು ( ) ನಡುವೆ ಪ್ರಯಾಣಿಸುತ್ತಿದ್ದ ರಾತ್ರಿ ಸ್ಲೀಪರ್‌ ಬಸ್ಸೊಂದರ ( ) ಪ್ರಯಾಣಿಕರಿಗೆ, ಬಸ್ಸಿನ ಮಲಗುವ ಒಂದು ಬರ್ತ್‌ನಲ್ಲಿ ವಿಚಿತ್ರ ಸದ್ದುಗಳು ಕೇಳಿಸಿದವು. ಕರ್ಟನ್‌ಗಳು ಮುಚ್ಚಿದ್ದ ಈ ಬರ್ತ್‌ನಲ್ಲಿ ನರಳಾಟ, ಮುಲುಗಾಟ ಕೇಳಿಬಂತು. ಪ್ರಯಾಣಿಕರು ಮುಜುಗರದಿಂದ ಹಿಂಸೆಪಟ್ಟುಕೊಂಡರು. ಬೆಳಗ್ಗೆ ಎದ್ದು ( ) ಪ್ರಯಾಣಿಕರು ಹೋದ ಬಳಿಕ ಬರ್ತ್‌ ಪರಿಶೀಲಿಸಿದ ಬಸ್ಸಿನ ಸಿಬ್ಬಂದಿಗೆ ಅಲ್ಲಿ ಬಳಸಿದ ಕಾಂಡೋಮ್‌ ಕಂಡುಬಂತು. ರಾತ್ರಿ ಏನು ನಡೆದಿತ್ತು ( ) ಎಂಬುದು ಸ್ಪಷ್ಟವಾಯಿತು.
ಇಂಥ ಅನುಭವಗಳು ಚೆನ್ನೈ- ಹೈದರಾಬಾದ್, ಚೆನ್ನೈ- ಕೊಚ್ಚಿ  ಬಸ್ಸುಗಳಲ್ಲಿಯೂ ಹಲವು ಪ್ರಯಾಣಿಕರಿಗೆ ಆಗಿವೆ. ಮಹಾನಗರಗಳ ನಡುವೆ ರಾತ್ರಿ ಬಸ್ಸುಗಳಲ್ಲಿ ಪ್ರಯಾಣಿಸುವ ಹಲವರು ಈ ಅಹಿತಕರ ಅನುಭವದ ಬಗ್ಗೆ ದೂರಿದ್ದಾರೆ. ಇಂಥ ಹಲವು ಅನುಭವಗಳ ಬಳಿಕ ಕೆಲವು ಬಸ್‌ ಆಪರೇಟರ್‌ಗಳು ಪೊಲೀಸರನ್ನು ಸಂಪರ್ಕಿಸಿದರು. ಪ್ರಕರಣಗಳ ಬೆನ್ನು ಬಿದ್ದ ಪೊಲೀಸರಿಗೆ ಶಾಕ್‌ ಕಾದಿತ್ತು.
ಚೆನ್ನೈಯ ಪೊಲೀಸ್ ಇಲಾಖೆಯ ಆಂಟಿ-ವೈಸ್ ಸ್ಕ್ವಾಡ್‌ ಈ ಪ್ರಕರಣಗಳನ್ನು ಭೇದಿಸಿತು. ಪ್ರಪಂಚದ ಅತೀ ಹಳೆಯ ದಂಧೆಯಾದ ವೇಶ್ಯಾವಾಟಿಕೆ ರಾತ್ರಿ ಬಸ್ಸುಗಳಿಗೂ ತನ್ನ ಬಾಹುಗಳನ್ನು ಚಾಚಿದೆ. ಇದು ʼದಾರಿಗೊಬ್ಬ ಸಂಗಾತಿʼ ಒದಗಿಸುವ ದಂಧೆಯಾಗಿದೆ. ಈ ʼಸಂಚಾರಿ ವೇಶ್ಯಾವಾಟಿಕೆʼಯಲ್ಲಿ ಯಾರನ್ನೂ ಬಂಧಿಸಲು ಪೊಲೀಸರು ಅಸಮರ್ಥರಾಗಿದ್ದಾರೆ. ಆದರೆ ಇಂಥ ಹಲವು ಪ್ರಕರಣಗಳನ್ನು ಪೊಲೀಸರು ಕಂಡುಕೊಂಡರು. ಚೆನ್ನೈಯಿಂದ ಬೆಂಗಳೂರು, ಕೊಚ್ಚಿ. ಹೈದರಾಬಾದ್‌, ಕೊಯಮತ್ತೂರುಗಳಿಗೆ ಹೋಗುವ ಬಸ್ಸುಗಳಲ್ಲೂ ಇವು ನಡೆದಿತ್ತು. ಇಂಥ ಕೆಲವು ಶಂಕಿತ ಜೋಡಿಗಳನ್ನು ಪ್ರಶ್ನಿಸಿದಾಗ, ಅವರು ತಾವು ಒಪ್ಪಿತ ಸಂಗಾತಿಗಳೆಂದೇ ಸಾಧಿಸಿದರು. ಆದರೆ ಅದು ವ್ಯಭಿಚಾರ ಅಥವಾ ವೇಶ್ಯಾವಾಟಿಕೆ ಎಂದು ಪ್ರೂವ್‌ ಮಾಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.
ಇಲ್ಲಿ ಸಂವಹನಕ್ಕೆ ಗಿರಾಕಿಗಳು ಮತ್ತು ಏಜೆಂಟರು ಚಾಟ್‌ ಆಪ್‌ಗಳನ್ನು ಬಳಸುತ್ತಾರಂತೆ. ಪಿಂಪ್‌ಗಳು ಗಿರಾಕಿಗಳಿಗೆ ಹುಡುಗಿಯರ ಫೋಟೋಗಳನ್ನು ಕಳಿಸಿ ಬುಕ್‌ ಮಾಡುತ್ತಾರೆ. ಒಂದು ʼಟ್ರಿಪ್‌ʼಗೆ 2000ದಿಂದ 10000ದವರೆಗೂ ಯುಪಿಐ ಮೂಲಕ ಪೀಕುತ್ತಾರೆ. ನಂತರ ಏಜೆಂಟರು ನೈಟ್‌ ಸ್ಲೀಪರ್‌ ಬಸ್ಸುಗಳ ಡಬಲ್‌ ಬರ್ತ್‌ಗಳನ್ನು ಬುಕ್‌ ಮಾಡುತ್ತಾರೆ. ಹೆಚ್ಚಾಗಿ ಇವು ಬಸ್ಸಿನ ಹಿಂದಿನ ಬರ್ತುಗಳಾಗಿತ್ತವೆ. ಗಂಡು- ಹೆಣ್ಣು ಗಂಡ ಹೆಂಡತಿಯರಂತೆ ನಟಿಸಿ ಬಸ್ಸು ಏರುತ್ತಾರೆ. ಸಿಬ್ಬಂದಿಗೆ ಇದರ ಅರಿವೇ ಇರುವುದಿಲ್ಲ. ಬಸ್ಸು ಹೊರಟ ಬಳಿಕ ಕರ್ಟನ್‌ ಮುಚ್ಚಿಕೊಂಡ ಈ ಜೋಡಿಯಿಂದ ʼಅನ್ಯ ಚಟುವಟಿಕೆʼ ನಡೆಯುತ್ತದೆ.
“ಕೆಲವೊಮ್ಮೆ ಇಂಥ ಬರ್ತ್‌ಗಳಲ್ಲಿ ಕಾಂಡೋಮ್‌, ಲಿಕ್ಕರ್‌ ಬಾಟಲಿಗಳು ಸಿಕ್ಕಿದ್ದುಂಟು. ಇಂಥ ಬೆಡ್‌ಶೀಟ್‌ಗಳನ್ನು ಕೂಡಲೇ ತೊಳೆಯಲು ಕಳುಹಿಸಬೇಕಾಗುತ್ತದೆ” ಎನ್ನುತ್ತಾರೆ ಚೆನ್ನೈ- ಬೆಂಗಳೂರು ಸಿಬ್ಬಂದಿಯೊಬ್ಬರು. ಸಿಕ್ಕಿಬಿದ್ದರೆ ಇವರು ತಾವು ಮದುವೆಯಾದ ಜೋಡಿ ಎಂದು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಅದನ್ನು ಪ್ರೂವ್‌ ಮಾಡಲು ಬೇಕಾದ ದಾಖಲೆ ಅವರಲ್ಲಿರುವುದಿಲ್ಲ. ಆದರೆ ತಾವು ರಿಲೇಷನ್‌ನಲ್ಲಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಸಿಬ್ಬಂದಿ ಅವರನ್ನು ಇತರರಿಗೆ ತೊಂದರೆ ಕೊಡದಂತೆ ವಾರ್ನ್‌ ಮಾಡಿ ಬಿಡಬಹುದಷ್ಟೇ.
ಪೊಲೀಸರ ಪ್ರಕಾರ ಇದರ ಹೆಚ್ಚಿನ ಗಿರಾಕಿಗಳು, ಕೆಲಸದ ನಿಮಿತ್ತವಾಗಿ ಊರೂರು ಸುತ್ತುವ ಉದ್ಯೋಗಿಗಳು. ದೈಹಿಕ ಸುಖಕ್ಕಾಗಿ ಲಾಡ್ಜ್‌ಗಳಿಗೆ ಹೋಗುವುದಕ್ಕಿಂತಲೂ ಅವರಿಗೆ ಇದೇ ಸುರಕ್ಷಿತವಂತೆ. ಬಸ್ಸಿನವರು ಯಾವುದೇ ಸರ್ಕಾರಿ ಐಡಿ ಕಾರ್ಡಿಗಾಗಿ ಒತ್ತಾಯಿಸದ ಹಿನ್ನೆಲೆಯಲ್ಲಿ, ಇಂಥ ಪ್ರಕರಣಗಳಲ್ಲಿ ಪಾಲ್ಗೊಂಡವರನ್ನು ಹುಡುಕುವುದು ಪೊಲೀಸರಿಗೆ ಕಷ್ಟವಾಗುತ್ತದೆ. ಒಬ್ಬಳೇ ಮಹಿಳೆ ಹಲವು ಪುರುಷರ ಜೊತೆಗೆ ಪ್ರಯಾಣಿಸುವುದನ್ನು ಬೆಂಗಳೂರಿನ ಬಸ್‌ ಸಿಬ್ಬಂದಿ ಕೆಲವೊಮ್ಮೆ ಗಮನಿಸಿದ್ದಾರೆ. ಹೆಚ್ಚಾಗಿ ಇವರು ಇತರ ರಾಜ್ಯದವರು, ಬೇರೆ ಭಾಷೆಯವರು.
ಇಂಥವರನ್ನು ಗುರುತಿಸಿ ಆಚೆ ಹಾಕುವುದೂ ಬಸ್ಸು ಸಿಬ್ಬಂದಿಗೆ ಕಷ್ಟ. ಇವರನ್ನು ಪ್ರಶ್ನಿಸಿದರೆ ಹಿಂಸಾತ್ಮಕವಾಗಿ ವರ್ತಿಸುತ್ತಾರೆ ಅಥವಾ ಟಿಕೆಟ್‌ ಬುಕಿಂಗ್‌ ಪ್ಲ್ಯಾಟ್‌ಫಾರಂಗಳಲ್ಲಿ ಈ ಬಸ್ಸುಗಳ ಬಗ್ಗೆ ನೆಗೆಟಿವ್‌ ರಿವ್ಯೂಗಳನ್ನು ಬರೆಯುತ್ತಾರೆ. ಹೀಗಾಗಿ ಎಚ್ಚರಿಕೆ ನೀಡಿ ಬಿಟ್ಟುಬಿಡಿ, ಪೊಲೀಸರ ಬಳಿಗೆ ಹೋಗಬೇಡಿ ಎಂದು ಡ್ರೈಬರ್‌ಗಳಿಗೆ ಮಾಲಿಕರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: : ಸರ್ಕಾರಿ ಶಾಲೆಯಲ್ಲಿ ನಡೆಯಿತು ಕುಡಿತ, ಕುಣಿತ; ವಿಡಿಯೊ ವೈರಲ್‌