ಬಾಲಿವುಡ್ ಸೂಪರ್‌ಸ್ಟಾರ್‌ ರಣವೀರ್ ಸಿಂಗ್‌ರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದ ನಥಿಂಗ್
• ನಥಿಂಗ್ ಡಿಜಿಟಲ್, ಪ್ರಿಂಟ್ ಮತ್ತು ಟಿವಿಸಿ ಅಭಿಯಾನಗಳಲ್ಲಿ ಕಾಣಿಸಿಕೊಳ್ಳಲಿರುವ ನಟ
ಲಂಡನ್ ಮೂಲದ ಗೃಹಬಳಕೆ ತಂತ್ರಜ್ಞಾನ ಬ್ರ್ಯಾಂಡ್ ನಥಿಂಗ್‌ ಭಾರತದ ಸುಪರ್‌ಸ್ಟಾರ್ ರಣವೀರ್ ಸಿಂಗ್ ಜೊತೆಗೆ ಸಹಭಾಗಿತ್ವ ಸಾಧಿಸಿರು ವುದಾಗಿ ಘೋಷಿಸಿದೆ. ಅವರು ನಥಿಂಗ್ ಸ್ಮಾರ್ಟ್‌ಫೋನ್‌ನ ಮುಖವಾಣಿಯಾಗಿರಲಿದ್ದಾರೆ ಮತ್ತು ಬ್ರ್ಯಾಂಡ್‌ನ ಮುಂಬರುವ ಕ್ಯಾಂಪೇನ್‌ಗಳಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ನಟರು ಡಿಜಿಟಲ್, ಮುದ್ರಣ ಮತ್ತು ಟಿವಿಸಿ ಕ್ಯಾಂಪೇನ್‌ಗಳಲ್ಲಿ ಕಂಡುಬರಲಿದ್ದಾರೆ.
ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ರಣವೀರ್ ಸಿಂಗ್ “ಈ ಕಂಪನಿಯ ಜೊತೆಗೆ ಸೇರಿಕೊಳ್ಳುವುದಕ್ಕೆ ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ! ಅವರ ಬ್ರ್ಯಾಂಡ್‌ನ ಸೌಂದರ್ಯ ಮತ್ತು ಅದ್ಭುತ ವಿನ್ಯಾಸವು ನನ್ನನ್ನು ಸೆಳೆಯಿತು. ಈ ಪಾಲುದಾರಿಕೆಗೆ ಹೊಸ ಅರ್ಥ ಸಿಗುತ್ತದೆ ಎಂದು ನಾನು ಭಾವಿಸಿದೆ. ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಹೊಸ ಅಲೆ ಎಬ್ಬಿಸುವುದಕ್ಕೆ ನಥಿಂಗ್ ಬದ್ಧವಾಗಿದೆ. ನಥಿಂಗ್ ಜೊತೆಗೆ ಸಹಭಾಗಿತ್ವ ಸಾಧಿಸಲು ಮತ್ತು ನಿಜವಾಗಿಯೂ ಅದ್ಭುತವಾದುದನ್ನು ರಚಿಸಲು ನಾನು ಕಾತರದಿಂದ ಕಾಯುತ್ತಿದ್ದೇನೆ” ಎಂದರು.
“ನಥಿಂಗ್ ಅನ್ನು ನಾವು ಆರಂಭಿಸಿದಾಗಿನಿಂದಲೂ, ಭಾರತದಿಂದ ನಮಗೆ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಬೆಂಬಲ ವ್ಯಕ್ತವಾಗಿದೆ. ಭಾರತದ ಮಾರ್ಕೆಟ್‌ನಲ್ಲಿ ನಮ್ಮ ಮಹತ್ವಾಕಾಂಕ್ಷೆ ಪ್ರತಿ ದಿನವೂ ವಿಸ್ತರಿಸುತ್ತಲೇ ಇದೆ. ಭಾರತದಲ್ಲಿ ಉತ್ಪಾದನೆಯನ್ನು ಆರಂಭಿಸಿದಾಗಿನಿಂದ, ದೇಶದಲ್ಲಿ ನಾವು ಹಲವು ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ನಮ್ಮ ಬ್ರ್ಯಾಂಡ್ ಅನ್ನು ಇನ್ನಷ್ಟು ಬೆಳೆಸುವುದಕ್ಕೆ ಈ ಪಾಲುದಾರಿಕೆ ಅತ್ಯಂತ ನೈಸರ್ಗಿಕ ಹಂತವಾಗಿದೆ. ರಣವೀರ್ ಅವರನ್ನು ನಮ್ಮ ಜೊತೆಗೆ ಸೇರಿಕೊಳ್ಳಲು ಅಧಿಕೃತವಾಗಿ ನಾನು ಆಹ್ವಾನಿಸುತ್ತಿದ್ದೇನೆ! ನಾವು ಹಲವು ಕಾಲದಿಂದಲೂ ಬಾಂಧವ್ಯವನ್ನು ಹೊಂದಿದ್ದೆವು. ಅವರ ಕ್ರಿಯಾಶೀಲತೆಯು ನಮ್ಮ ಬ್ರ್ಯಾಂಡ್‌ಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಈ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಕಾಯುತ್ತಿದ್ದೇವೆ!” ಎಂದು ನಥಿಂಗ್‌ ಸಹ ಸಂಸ್ಥಾಪಕ ಅಕಿಸ್ ಇವಾಂಜೆಲಿಡಿಸ್‌ ಹೇಳಿದ್ದಾರೆ.ಇತ್ತೀಚೆಗೆ, ನಥಿಂಗ್‌ನ ಮುಂಬರುವ ಸ್ಮಾರ್ಟ್‌ಫೋನ್ ಫೋನ್ (2ಎ) ಅನ್ನು ಮಾರ್ಚ್‌ 5 ರಂದು ಜಾಗತಿಕವಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಭಾರತದ ದೆಹಲಿಯಿಂದ ಈ ಕಾರ್ಯಕ್ರಮವನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ ಮತ್ತು ಇದರಲ್ಲಿ ಸಾವಿರಾರು ಜನರು ಭಾಗಿಯಾಗಲಿದ್ದಾರೆ. ದೈನಂದಿನ ಸ್ಮಾರ್ಟ್‌ಫೋನ್ ಅನುಭವವನ್ನು ಉತ್ತಮವಾಗಿಸಲು ಮತ್ತು ಮೂಲ ಬಳಕೆದಾರರ ಅಗತ್ಯವನ್ನು ದುಪ್ಪಟ್ಟು ಮಾಡಲು, ನಥಿಂಗ್‌ ವಿನ್ಯಾಸದ ಅನ್ವೇಷಣೆ, ಪರಿಣಿತಿ ಮತ್ತು ಕೌಶಲವನ್ನೆಲ್ಲ ಬಳಸಿಕೊಳ್ಳುವ ಉದ್ದೇಶದಿಂದ ಫೋನ್ (2ಎ) ಅನ್ನು ರೂಪಿಸಲಾಗಿದೆ. ಫೋನ್ (2) ಯಲ್ಲಿರುವ ಬಹುತೇಕ ವೈಶಿಷ್ಟ್ಯಗಳನ್ನು ಫೋನ್ (2ಎ) ಬಳಸಿಕೊಳ್ಳಲಿದೆ ಮತ್ತು ಎಲ್ಲ ವಿಷಯದಲ್ಲೂ ಫೋನ್ (1) ಗೆ ಹೋಲಿಸಿದರೆ ಅಪ್‌ಗ್ರೇಡ್ ಆಗಿರಲಿದೆ.ಚಿತ್ರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ: 
ನಥಿಂಗ್ ಬಗ್ಗೆ2020 ರಲ್ಲಿ ಸ್ಥಾಪಿಸಲಾದ ನಥಿಂಗ್, ತಂತ್ರಜ್ಞಾನವನ್ನು ಇನ್ನಷ್ಟು ವಿನೋದಮಯವಾಗಿಸುವ ಉದ್ದೇಶವನ್ನು ಹೊಂದಿದೆ. ಇದರ ಮೊದಲ ಸ್ಮಾರ್ಟ್‌ಫೋನ್ ಫೋನ್ (1) ಟೈಮ್ ಮ್ಯಾಗಜಿನ್‌ನ ಪ್ರತಿಷ್ಠಿತ “ಬೆಸ್ಟ್ ಇನ್ವೆನ್ಶನ್ಸ್ 2022” ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅತ್ಯಾಧುನಿಕ ವಿನ್ಯಾಸ ಮತ್ತು ಬಳಕೆದಾರರ ಇಂಟರ್‌ಫೇಸ್‌ ಮೂಲಕ ಲಂಡನ್ ಮೂಲದ ಈ ಕಂಪನಿ ಯುವಜನತೆಗೆ ಹೊಸ ತಂತ್ರಜ್ಞಾನದ ಉತ್ಪನ್ನಗಳಿಗೆ ಒಂದು ಪರ್ಯಾಯವನ್ನು ಸೃಷ್ಟಿಸಿದೆ.
2023 ರಲ್ಲಿ ಫೋನ್ (2) ಅನ್ನು ಬಿಡುಗಡೆ ಮಾಡಿದ್ದು, ತನ್ನ ಸಮುದಾಯ, ಮಾಧ್ಯಮ ಮತ್ತು ವಿನ್ಯಾಸ ಉತ್ಸಾಹಿಗಳಿಗೆ ಭಾರಿ ಆಸಕ್ತಿಯನ್ನು ಹುಟ್ಟಿಸಿದೆ. ಕೇವಲ ಮೂರು ವರ್ಷಗಳಲ್ಲಿ ತಮ್ಮ ಎರಡು ಮಿಲಿಯನ್ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ಇದು ತಲುಪಿದೆ.
ಈವರೆಗೆ, ನಥಿಂಗ್ ಮೂರು ಆಡಿಯೋ ಉತ್ಪನ್ನಗಳು, ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. 2023 ಸೆಪ್ಟೆಂಬರ್ ವೇಳೆಗೆ ಉಪ ಬ್ರ್ಯಾಂಡ್ ಸಿಎಂಎಫ್ ಬೈ ನಥಿಂಗ್ ಅನ್ನೂ ಪ್ರಕಟಿಸಿದೆ. ಎಲ್ಲ ನಥಿಂಗ್ ಪ್ರಾಡಕ್ಟ್‌ಗಳನ್ನು ತನ್ನ ಸಮುದಾಯದ ಸಹಭಾಗಿತ್ವದಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ 8,000 ಖಾಸಗಿ ಹೂಡಿಕೆದಾರರನ್ನೂ ಒಳಗೊಂಡಿದೆ ಮತ್ತು ಸುಸ್ಥಿರತೆಯನ್ನೇ ಪ್ರಮುಖ ಆದ್ಯತೆಯನ್ನಾಗಿ ರೂಪಿಸಲಾಗಿದೆ.
ಯಾವುದೇ ವಿಚಾರಣೆಗಳಿಗಾಗಿ, ದಯವಿಟ್ಟು ಸಂಪರ್ಕಿಸಿ:ನಿತಿನ್ ಯಾದವ್: .yadav_c@.techಆಯುಷ್ ಗೌತಮ್: @-.